ಪೇರಡ್ಕ – ಗೂನಡ್ಕ : ಮುಹಿಯ್ಯದ್ದೀನ್ ರಿಫಾಯಿ ದಫ್ ಅಸೋಸಿಯೇಶನ್ ವತಿಯಿಂದ ಇಸ್ಲಾಂಮಿಕ್ ಕಥಾ ಪ್ರಸಂಗ

0

ದ.ಕ‌. ಸಂಪಾಜೆ ಗ್ರಾಮದ ಪೇರಡ್ಕ-ಗೂನಡ್ಕ ಮುಹಿಯ್ಯದ್ದೀನ್ ರಿಫಾಯಿ ದಫ್ ಅಸೋಸಿಯೇಶನ್ ವತಿಯಿಂದ ಇಸ್ಲಾಾಮಿಕ್ ಕಥಾಪ್ರಸಂಗ ಹಾಗೂ ಸನ್ಮಾನ ಕಾರ್ಯಕ್ರಮವು ಡಿ.16 ಮತ್ತು 17ರಂದು ಪೇರಡ್ಕದ ಜುಮ್ಮಾ ಮಸೀದಿಯ ವಠಾರದಲ್ಲಿ ಜರುಗಿತು.

ಗೂನಡ್ಕ – ಪೇರಡ್ಕ ಎಂ.ಜೆ.ಎಂ. ಅಧ್ಯಕ್ಷ ಟಿ.ಎಂ. ಶಹೀದ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಎಂ.ಜೆ.ಎಂ.ನ ಖತೀಬರಾದ ರಿಯಾಝ್ ಪೈಝಿ ಅವರು ಉದ್ಘಾಟಿಸಿದರು.

ಝಬೈರ್ ಮಾಸ್ಟರ್ ತೋಟಿಕಲ್ ಹಾಗೂ ಸಂಘಡಿಗರು ಇಸ್ಲಾಮಿಕ್ ಕಥಾಪ್ರಸಂಗದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಹಲವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಡಿ.17ರಂದು ಸಂಜೆ
ವಿವಿಧ ಮದರಸದ ಮಕ್ಕಳಿಂದ ಆಕರ್ಷಕ ದಫ್ ಪ್ರದರ್ಶನ ಮೆರವಣಿಗೆ ಜರುಗಿತು.
ಕಲ್ಲುಗುಂಡಿ ಮಹಿಳಾ ಶರೀಚಿತ್ ಕಾಲೇಜಿನ ಫಾತಿಮಾ ಅವರು ಕಾರ್ಯಕ್ರಮವನ್ನು ದಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪೇರಡ್ಕ ಎಂ.ಜೆ‌.ಎಂ. ಆರ್.ಡಿ.ಎ.ಅಧ್ಯಕ್ಷ ಜಿ.ಕೆ. ಹಮೀದ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಯ್ಯದ್ ಹಕ್ಕೀಂ ತಂಙಳ್ ಆದೂರು ಅವರು ದು:ವಾ ನೆರವೇರಿಸಿದರು. ಕಾರ್ಯಕ್ರಮವನ್ನು ಪೇರಡ್ಕ ಎಂ.ಜೆ.ಎಂ. ಖತೀಬರಾದ ರಿಯಾಜ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಟಿ.ಎಂ‌. ಶಹೀದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ
ಸುಳ್ಯದ ಉದ್ಯಮಿ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.