ಡಿ.23:ಸುಳ್ಯರಾಮ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ ಹಾಗೂ ದುರ್ಗಾ ಪೂಜೆ

0

ಸುಳ್ಯದ ಶ್ರೀ ರಾಮ ಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಅರ್ಧ ಏಕಾಹ ಭಜನಾ ಸಂಕೀರ್ತನೆ ಹಾಗೂ ಸಾಮೂಹಿಕ ಶ್ರೀ ದುರ್ಗಾ ಪೂಜೆಯು ಡಿ.23 ರಂದು ನಡೆಯಲಿರುವುದು.
ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.
ರಾತ್ರಿ ವಿಶೇಷವಾಗಿ ಸಾಮೂಹಿಕ ದುರ್ಗಾ ಪೂಜೆಯು ನಡೆಯಲಿದ್ದು ಮಹಾ ಪೂಜೆಯ ನಂತರ ಸಾರ್ವಜನಿಕ ಪ್ರಸಾದ ವಿತರಣೆಯಾಗಲಿರುವುದುಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ತಿಳಿಸಿರುತ್ತಾರೆ.