ಸುಳ್ಯ ದಸರಾ ಉತ್ಸವ : ಚಪ್ಪರ‌ ಮುಹೂರ್ತ

0

ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ದಸರಾ – 53 ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಅ.9ರಿಂದ ಆರಂಭಗೊಳ್ಳಲಿದ್ದು, ಚಪ್ಪರ ಮುಹೂರ್ತ ಕಾರ್ಯಕ್ರಮ ಸೆ.17 ರಂದು‌ ನಡೆಯಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದ ವಿಶಾಲವಾದ ಜಾಗದಲ್ಲಿ ದಸರಾ ಉತ್ಸವ ನಡೆಯಲಿದೆ.

ಚೆನ್ನಕೇಶವ ದೇವಸ್ಥಾನದ ಅರ್ಚಕರಾದ ಹರಿಕೃಷ್ಣ ರವರು ಪೂಜಾ ಕಾರ್ಯ ನೆರವೇರಿಸಿದ ಬಳಿಕ, ಚಪ್ಪರ ಮುಹೂರ್ತಕ್ಕೆ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಉಪಾಧ್ಯಕ್ಷ ರಾದ ಡಾ.ಯಶೋದಾ ರಾಮಚಂದ್ರ, ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ.ಸತೀಶ್, ಖಜಾಂಚಿ ಬೂಡಿ ರಾಧಾಕೃಷ್ಣ ರೈ, ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ ಡಿ.ವಿ., ಕೋಶಾಧಿಕಾರಿ ಗಣೇಶ್ ಆಳ್ವ, ಗೌರವ ಸಲಹೆಗಾರರಾದ ಎನ್.ಜಯಪ್ರಕಾಶ್ ರೈ, ಎನ್.ಎ.ರಾಮಚಂದ್ರ, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಸುನಿಲ್ ಕುಮಾರ್ ಕೇರ್ಪಳ, ಕೃಷ್ಣ ಬೆಟ್ಟ, ಭವಾನಿಶಂಕರ್ ಕಲ್ಮಡ್ಕ, ದೊಡ್ಡಣ್ಣ ಬರೆಮೇಲು, ಸನತ್ ಪೆರಿಯಡ್ಕ, ಗಿರೀಶ್ ಡಿ.ಎಸ್., ಶಶಿಧರ ಎಂ.ಜಿ, ದೇವಿಪ್ರಸಾದ್ ಅತ್ಯಾಡಿ, ಶಿವನಾಥ ರಾವ್, ವಿಠಲ ಗೌಡ, ನವೀನ್ ಎಲಿಮಲೆ, ಸುಪ್ರಿತಾ ಕೇಕಡ್ಕ, ಜಯಕೃಷ್ಣ ಕಾಯರ್ತೋಡಿ, ಹೇಮಾವತಿ ಗೋಪಾಲ ದೇಂಗೋಡಿ, ಉಷಾ ದೇವಸ್ಯ, ಕಿಶೋರಿ ಶೇಟ್ ಮೊದಲಾದವರಿದ್ದರು.