ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡುವ ಸಂದರ್ಭ ರಸ್ತೆ ಬದಿ ತೆಗೆದ ಹೊಂಡ ಅಸಮರ್ಪಕವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮರ್ಕಂಜದಿಂದ ಗೋಳಿಯಡ್ಕಕ್ಕೆ ಹೋಗುವ ರಸ್ತೆ ತೀರಾ ಹದಗೆಟ್ಟು ಹೋಗಿದೆ, ಅಂತಹ ರಸ್ತೆಯ ಬದಿ ಅವೈಜ್ಞಾನಿಕವಾಗಿ ಜೆಸಿಬಿಯಲ್ಲಿ ಅಗೆದು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಪೈಪ್ ಹಾಕಲು ತೆಗೆದ ಹೊಂಡದ ಪರಿಣಾಮ ಇದ್ದ ಡಾಮಾರು ರಸ್ತೆಯು ಕಚ್ಚಾ ರಸ್ತೆಯಾದಂತಾಗಿದೆ. ರಸ್ತೆಯ ಅಗಲ ಕಿರಿದಾದ ಕಾರಣ ಕೊಟ್ರಡ್ಕದಿಂದ ಗೋಳಿಯಡ್ಕ ಮದ್ಯೆ , ದ್ವಿಚಕ್ರ, ಕಾರು ವಾಹನ ಸವಾರರಿಗೆ ಸಂಚರಿಸಲು ಮತ್ತು ನಡೆದಾಡುವವರಿಗೆ ತೊಂದರೆಯಾಗಿದೆ. ಅಲ್ಲದೆ ರಸ್ತೆ ಧೂಳುಮಯವಾಗಿದೆ.
ರಸ್ತೆಯ ಎರಡು ಬದಿ ಪೊದೆಗಳು ಆವರಿಸಿರುವ ಕಾರಣ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಪೈಪ್ ಹಾಕಿ ಹೊಂಡಗಳನ್ನು ಮುಚ್ಚುವ ಕಾರ್ಯ ಸಮರ್ಪಕವಾಗಿರದ ಕಾರಣ ಅನಾಹುತ ಸಂಭವಿಸುವ ಮೊದಲೇ ಇದನ್ನು ಸಂಬಂಧ ಪಟ್ಟವರು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.