ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ 13 ನಿರ್ದೇಶಕರುಗಳ ಆಯ್ಕೆಯಾಗಿ ಡಿ.28ರಂದು ಚುನಾವಣೆ ನಡೆಯಬೇಕಿತ್ತು . ಡಿ.16ರಿಂದ 21ರವರೆಗೆ 15 ಮಂದಿ ನಾಮಪತ್ರ ಸಲ್ಲಿಸಿದರು .
ಅದರಲ್ಲಿ ಹೊನ್ನಪ್ಪಗೌಡ ಐಪಳ ಮತ್ತು ಬಾಲಕೃಷ್ಣರೈ ಕಿನ್ಯಾಳಗುತ್ತುರವರು ನಾಮಪತ್ರ ಹಿಂತೆಗೆದು ಕೊಂಡು,ಉಳಿದ 13 ಮಂದಿ ಅವಿರೋಧವಾಗಿ ಆಯ್ಕೆಯಾದರು. ದಾಮೋದರ ಗೌಡ ಲೆಕ್ಕಿಸಿರಿಮಜಲು, ಶೀನಪ್ಪ ನಾಯ್ಕ ಅಳಕ್ಕೆ, ಜಯಪ್ರಕಾಶ್ ಲೆಕ್ಕಿಸಿರಿಮಜಲು, ಜಗದೀಶ್ ಶೆಟ್ಟಿ ಕಿನ್ಯಾಳಗುತ್ತು, ಸುಧೀರ್ ಕುಮಾರ್ ಶೆಟ್ಟಿ ಕೆ. ಕಟ್ಟಬೀಡು, ಬಾಲಕೃಷ್ಣ ಹೇಮಳ, ಶ್ರೀಮತಿ ಜಯಶೀಲ ಏನಡ್ಕ, ಮಾಯಿಲಪ್ಪ ಗೌಡ ಮರೋಳಿ , ಶ್ರೀಮತಿ ಪುಷ್ಪಾವತಿ ಅಳಕ್ಕೆ , ದಿವಾಕರ ಪಿ., ಚೋಮು ಡೆ ಮ್ಮಾಯಿಲ, ಈಶ್ವರಗೌಡ ಜಾಲ್ತಾರು, ಶ್ರೀಮತಿ ಚಂದ್ರಾವತಿ ಪಂಜಿ ಮುಂಡ, ಈ 13 ಜನರು ಚುನಾವಣಾಧಿಕಾರಿ ಶಿವ ಲಿಂಗಯ್ಯ ಎಂ. ಮತ್ತು ಸಂಘದ ಕಾರ್ಯದರ್ಶಿ ಮಾಧವ ವೈ.ಯವರು ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದರು.