ಸುಳ್ಯ ನಗರದ ರಸ್ತೆೆ ಮತ್ತು ಗ್ರಾಾಮೀಣ ರಸ್ತೆೆಗಳನ್ನು ಸರಿಪಡಿಸುವಂತೆ ಅಟೋರಿಕ್ಷಾ ಚಾಲಕರ ಸಂಘದಿಂದ ಮನವಿ

0

ಸುಳ್ಯದ ನಗರ ಭಾಗದಲ್ಲಿ ಸುಮಾರು 600 ರಿಕ್ಷಾ ಚಾಲಕರು ತಮ್ಮ ದೈನಂದಿನ ದುಡಿಮೆ ಮಾಡುತ್ತಿದ್ದು, ಈ ದುಡಿಮೆಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾಗಿದ್ದು, ಸುಳ್ಯ ನಗರ ಭಾಗದ ಜಟ್ಟಿಪಳ್ಳ ರಸ್ತೆೆಯಿಂದ ನೀರಬಿದಿರೆ ರಸ್ತೆೆ, ಜೂನಿಯರ್ ಕಾಲೇಜು ರಸ್ತೆೆ ಹಾಗೂ ನಗರದ ಇತರ ಭಾಗದಲ್ಲಿರುವ ರಸ್ತೆೆಗಳು ತೀರಾ ಹದಗೆಟ್ಟಿರುವ ಕಾರಣ ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆೆಯಲ್ಲಿ ವಾಹನಗಳನ್ನು ಓಡಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಘಟನೆಯು ನಗರದ ಎಲ್ಲಾ ರಸ್ತೆೆ ಮತ್ತು ಗ್ರಾಮೀಣ ಭಾಗದ ಹದಗೆಟ್ಟ ರಸ್ತೆೆಗಳನ್ನು ತಮ್ಮ ಮನವಿಗೆ ಸ್ಪಂದಿಸಿ ಡಿ.26 ರ ಒಳಗೆ ಸರಿಪಡಿಸಿಕೊಡಬೇಕು ಎಂದು ನಗರ ಪಂಚಾಯತ್ ಗೆ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದಿಂದ ಮನವಿ ಮಾಡಿದರು.

ಇಲ್ಲದಿದ್ದಲ್ಲಿ ನಗರ ಪಂಚಾಯತ್ ಎದುರು ಡಿ.27 ರಂದು ಪ್ರತಿಭಟನೆ ಮಾಡುವುದಾಗಿ ಅಟೋರಿಕ್ಷಾ ಚಾಲಕರ ಸಂಘದಿಂದ ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ತಿಳಿಸಿದ್ದಾರೆ