ಬಡ್ಡಡ್ಕ -ಕಲ್ಲಪಳ್ಳಿ ಅಯ್ಯಪ್ಪ ಭಜನಾ ಮಂದಿರದ ಅಯ್ಯಪ್ಪ ದೀಪೋತ್ಸವ- ಧಾರ್ಮಿಕ ಸಭೆ ಹಾಗೂ ಸನ್ಮಾನ

0

ಬಡ್ಡಡ್ಕ- ಕಲ್ಲಪಳ್ಳಿ
ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ 37 ನೇ ವರ್ಷದ ಅಯ್ಯಪ್ಪ ಸ್ವಾಮಿಯದೀಪೋತ್ಸವವು ಡಿ. 24 ರಂದು ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಜರುಗಿತು.

ಬೆಳಗ್ಗೆ ಪುರೋಹಿತ ವೆಂಕಟ್ರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಮಧ್ಯಾಹ್ನ ಮಹಾ ಪೂಜೆಯಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನದಾನವು ನಡೆಯಿತು.


ಸಂಜೆ ಪಿಂಡಿಬನ ವಿಷ್ಣುಮೂರ್ತಿ ದೈವಸ್ಥಾನದಿಂದ ಪಾಲ್ ಕೊಂಬು ಮೆರವಣಿಗೆಯು ಅಯ್ಯಪ್ಪ ಭಜನಾ ಮಂದಿರದವರೆಗೆ ಅಯ್ಯಪ್ಪ ವೃತಧಾರಿಗಳ ಶರಣು ಘೋಷದೊಂದಿಗೆ ವಿಶೇಷವಾಗಿ ಬಾಲಕಿಯರ ಬೆಳಕಿನ ದೀಪದೊಂದಿಗೆ, ಚೆಂಡೆ ವಾದನ ಹಾಗೂ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ವೈಭವದಿಂದ ಸಾಗಿ ಬಂತು. ನಂತರ ಅಯ್ಯಪ್ಪ ವ್ರತಧಾರಿಗಳಿಂದ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ಭಜನಾ ಮಂದಿರದ ಮುಂಭಾಗದಲ್ಲಿ ಜಯಪ್ರಕಾಶ್ ಪೆರುಮುಂಡ ರವರ ನೇತೃತ್ವದಲ್ಲಿ ಆದರ್ಶ ಮಹಿಳಾ ಸಂಘದ ಸದಸ್ಯರಿಂದ ಆಕರ್ಷಕ ಕುಣಿತ ಭಜನೆಯು ಪ್ರದರ್ಶನವಾಯಿತು.


ಬಳಿಕ ಧಾರ್ಮಿಕ ಸಭೆಯು ದಿ.ಕೃಷ್ಣ ಗುರುಸ್ವಾಮಿ ಕಲಾ ವೇದಿಕೆಯಲ್ಲಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ
ಬಿ .ದಿನೇಶ್ ಬಡ್ಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯಮಾರ್ಗದರ್ಶಕರು, ಸ್ಥಳದಾನಿಗಳಾದ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ, ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಚಂದ್ರ ಪಿ.ಕೆ, ಮಂದಿರದ ಗೌರವಾಧ್ಯಕ್ಷ ಡಾ| ಜಯದೀಪ್ ಎನ್. ಎ,ರಾಮಕೃಷ್ಣಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷೆ ಡಾ| ಸಾಯಿಗೀತಾ ಜ್ಞಾನೇಶ್ ಎನ್.ಎ,ಪಂಚಾಯತ್ ಸದಸ್ಯೆ ಶ್ರೀಮತಿ ಭಾಗೀರಥಿ ಪತ್ತುಕುಂಜ, ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣಕೊಯಿಂಗಾಜೆ, ಗುರುಸ್ವಾಮಿ ಜನಾರ್ಧನ ಜಿ.ಕೆ ಕಲ್ಲಪಳ್ಳಿ, ಖಜಾಂಜಿ ನಂದಕುಮಾರ್ ಪಿ.ಬಿ ಬಾಟೋಳಿ ಯವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಳೆದ 17 ವರ್ಷಗಳಿಂದ ದೀಪೋತ್ಸವದ ಸಮಯದಲ್ಲಿ ಭೋಜನದ ತಯಾರಿಯಲ್ಲಿ ಪಾಕ ತಜ್ಞರಾಗಿ ಸೇವೆ ಸಲ್ಲಿಸಿದ ಕೊರಗನ್ ಬಡ್ಡಡ್ಕ ರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಮಂದಿರಕ್ಕೆ ಅಗತ್ಯವಿರುವ ಸ್ಟೀಲ್ ಬಟ್ಟಲನ್ನು ಕೊಡುಗೆ ನೀಡಿದ ಅಮರ ಕ್ರೀಡಾ ಕಲಾ ಸಂಘದ ಸದಸ್ಯರನ್ನು ಅಭಿನಂದಿಸಲಾಯಿತು.
ಕು.ದಿಶಾ ಆಲೆಟ್ಟಿ ಪ್ರಾರ್ಥಿಸಿದರು. ಪ್ರಾಸ್ತಾವಿಕ ಮಾತಿನೊಂದಿಗೆ ಮಂದಿರದ ಪ್ರಧಾನ ಕಾರ್ಯದರ್ಶಿ ದಯಾನಂದ ಪತ್ತುಕುಂಜ ರವರು ಸ್ವಾಗತಿಸಿದರು.
ಜತೆ ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಪೂಜೆಯಾಗಿ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಯಾಯಿತು.
ಅಯ್ಯಪ್ಪವ್ರತಧಾರಿಗಳಿಂದ ವಿಶೇಷವಾಗಿ ರಾತ್ರಿ ಅಪ್ಪ ಸೇವೆಯಾಗಿ ಮಹಾಪೂಜೆಯು ನೆರವೇರಿತು.
ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸೇವೆಯು ನಡೆದು ದೀಪಾರಾಧನೆಯಾಗಿ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯಾಗಿ ಪ್ರಸಾದವಿತರಣೆಯೊಂದಿಗೆ ಉತ್ಸವವು ಸಮಾಪನಗೊಂಡಿತು.
ರಾತ್ರಿ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ ಬಾಳ ಕಳವಾರು ಮಂಗಳೂರು ಇವರಿಂದ ಸತ್ಯೋದ ಸ್ವಾಮಿ ಕೊರಗಜ್ಜ ಎಂಬ ತುಳು ಯಕ್ಷಗಾನ ಕಥಾಪ್ರಸಂಗ ಪ್ರದರ್ಶನಗೊಂಡಿತು.
ಭಜನಾ ಮಂದಿರದ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ,ಜೀರ್ಣೋದ್ಧಾರ ಸಮಿತಿ ಹಾಗೂ ಉತ್ಸವ ಸಮಿತಿ ಸದಸ್ಯರು ಸಹಕರಿಸಿದರು.
ಊರ ಪರ ಊರಿನ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.