ಡಿ. 31: ಸುಳ್ಯ ಸಂತ ಬ್ರಿಜೆಡ್ಸ್ ಚರ್ಚ್ ಕ್ರಿಸ್ಮಸ್ ಸೌಹಾರ್ದ ಕೂಟ 2023 ಹಾಗೂ ಸಾಧಕರಿಗೆ ಸನ್ಮಾನ

0

ಸುಳ್ಯ ಸಂತ ಬ್ರಿಜಡ್ಸ್ ಚರ್ಚ್ ಐ.ಸಿ.ವೈ.ಎಂ,ಯುವ ಆಯೋಗ ಮತ್ತು ಪಾಲನಾ ಪರಿಷದ್‌ ಸಹಕಾರದೊಂದಿಗೆ ಡಿ.31 ರಂದು ಕ್ರಿಸ್ಮಸ್ ಸೌಹಾರ್ದಕೂಟ-2023 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂತ ಬ್ರಜಡ್ಸ್ ಚರ್ಚ್ ಆವರಣದಲ್ಲಿ ರಾತ್ರಿ 8:30 ರಿಂದ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮ ಗುರುಗಳಾದ ರೆlಫಾlವಿಕ್ಟರ್ ಡಿಸೋಜಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಎಂ ವೆಂಕಪ್ಪಗೌಡ,ಡೇವಿಡ್ ಧೀರಾ ಕ್ರಾಸ್ತ ಹಾಗೂ ಇನ್ನಿತರ ಗಣ್ಯರು, ಶಾಲಾ ಮುಖ್ಯೋಪಾಧ್ಯಾಯರುಗಳು, ಪಾಲನಾಪರಿಷತ್ ಪದಾಧಿಕಾರಿಗಳು,ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದ್ದು ಪತ್ರಿಕೋದ್ಯಮ ಕ್ಷೇತ್ರದಿಂದ ಹಸೈನಾರ್ ಜಯನಗರ ವರದಿಗಾರರು ಸುದ್ದಿ ಪತ್ರಿಕೆ ಸುಳ್ಯ, ಸಮಾಜ ಸೇವಾ ಕ್ಷೇತ್ರದಿಂದ ಬಿ ಕೇಶವ ಬಂಗ್ಲೆಗುಡ್ಡೆ,ಶ್ರೀಮತಿ ಅಪೊಲಿನ್ ಡಿಸೋಜಾ ರವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.