ನಾಲ್ಕುರು: ತಿಪ್ಪನೂರು ಕುಟುಂಬಸ್ಥರ ಧರ್ಮದೈವ ನೇಮೋತ್ಸವ

0

ನಾಲ್ಕುರು ಗ್ರಾಮದಲ್ಲಿರುವ ತಿಪ್ಪನೂರು ಕುಟುಂಬಸ್ಥರ ಧರ್ಮದೈವ ನಡಾವಳಿ ಎರಡು ದಿನಗಳ ಕಾಲ ನಡೆಯಿತು. ಕ್ರಮವಾಗಿ ಗುರು ಕಾರನೂರು, ಪಾಷಣಮೂರ್ತಿ ದೈವದ ನೇಮ, ವರ್ಣರ ಪಂಜುರ್ಲಿ , ಕುಪ್ಪೆ ಪಂಜುರ್ಲಿ, ನಾಗ ಚಾಮುಂಡಿ, ಶಿರಾಡಿ ದೈವ ರುದ್ರ ಚಾಮುಂಡಿ, ಧರ್ಮ ದೈವ ಗುಳಿಗ ನೇಮ ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸುಂದರ ಗೌಡ ತಿಪ್ಪನೂರು ಸೇರಿದಂತೆ ಕುಟುಂಬಸ್ಥರು, ಬಂದು ಮಿತ್ರರು , ಊರಿನವರು ನೇಮೋತ್ಸವದಲ್ಲಿ ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು.

ವರದಿ ಡಿ.ಎಚ್.