ಭಸ್ಮಡ್ಕ : ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

0

ಉಪ್ಪಳ ನಿವಾಸಿ ಸಮೀರ್ ಸಾವನ್ನಪ್ಪಿದ ಯುವಕ


ಸುಳ್ಯ ಭಸ್ಮಡ್ಕ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋಗಿ ನೀರು ಪಾಲಾದ ಯುವಕನ ಮೃತದೇಹ ಪತ್ತೆಯಾಗಿದೆ. ಉಪ್ಪಳ ನಿವಾಸಿ ಸಮೀರ್ ಮೃತ ಯುವಕನಾಗಿದ್ದು, ಸುಳ್ಯದ ಕುರುಂಜಿಬಾಗ್‌ನಲ್ಲಿರುವ ವಿಶನ್ ಆಪ್ಟಿಕಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.

ಇಂದು ರಜೆ ಇದ್ದ ಹಿನ್ನಲೆಯಲ್ಲಿ ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬ ಕಣ್ಮರೆಯಾಗಿದ್ದು ಮುಳುಗಿದ್ದಾನೆನ್ನಲಾಗಿದೆ. ಸುಳ್ಯ ಆರಕ್ಷಕ ಠಾಣೆ , ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.