ಸುಳ್ಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಆಶಾ ನಾಯಕ್

0


ಪದೋನ್ನತಿಗೊಂಡ ಶ್ರೀಮತಿ ನಳಿನಿ ಮಣಿಕ್ಕಾರಕ್ಕೆ, ಟೈಟಸ್ ವರ್ಗಿಸ್ ಎಣ್ಮೂರಿಗೆ


ಎಡಮಂಗಲ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಅಬ್ದುಲ್ ಖಾದರ್

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಆಶಾ ನಾಯಕ್ ಎಂಬವರು ನೇಮಕಗೊಂಡಿದ್ದಾರೆ. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿರುವ ಶ್ರೀಮತಿ ನಳಿನಿ ಪುರುಷೋತ್ತಮ ಕಿರ್ಲಾಯರಿಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿಯಾಗಿದ್ದು ಅವರು ಪುತ್ತೂರು ತಾಲೂಕು ಮಣಿಕ್ಕಾರ ಸರಕಾರಿ ಪ್ರೌಢಶಾಲೆಗೆ ವರ್ಗಾ ವಣೆಯಾಗಿದ್ದರೆ, ಪಂಜ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಟೈಟಸ್ ವರ್ಗಿಸ್‌ರಿಗೆ ಎಣ್ಮೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಹಾಗೂ ಕಡಬ ಕೊಣಾಲು ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಅಬ್ದುಲ್ ಖಾರದ್‌ರವರು ಪದೋನ್ನತಿಗೊಂಡು ಎಡಮಂಗಲ ಸರಕಾರಿ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ನೇಮಕ ಗೊಂಡಿದ್ದಾರೆ.


ಆಶಾ ನಾಯಕ್ : ಮಂಗಳೂರು ಉತ್ತರ ಬಂದರು ಉರ್ದು ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಆಶಾ ನಾಯಕ್‌ರಿಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಪದೋನ್ನತಿಯಾಗಿದ್ದು ಅವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ಜ.೧ರಂದು ಅವರು ಸುಳ್ಯದಲ್ಲಿ ಅಧಿಕಾರ ವಹಿಸಲಿ ದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.


ಶ್ರೀಮತಿ ನಳಿನಿ : ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿರುವ ಶ್ರೀಮತಿ ನಳಿನಿಯವರು ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡು ಪುತ್ತೂರು ಮಣಿಕ್ಕಾರ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ. ೧೯೯೬ರಲ್ಲಿ ಗಾಂಧಿನಗರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆಗೆ ಸೇರಿದ ಇವರು, ೨೦೧೯ರಲ್ಲಿ ಗೋಳ್ತಮಜಲು ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಯಾದರು. ೨೦೨೦ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಶಿಕ್ಷಣ ಸಂಯೋಜಕರಾಗಿ ಬಂದರು. ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯರ ಪತ್ನಿ.


ಟೈಟಸ್ ವರ್ಗಿಸ್ : ಪಂಜ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಭಾಗದಲ್ಲಿ ಶಿಕ್ಷಕರಾಗಿರುವ ವರ್ಗಿಸ್‌ರವರು ಪದೋನ್ನತಿಗೊಂಡಿದ್ದಾರೆ. ೧೯೯೬ರಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ ಸೇವೆ ಆರಂಭಿಸಿದ ಇವರು, ಬಳಿಕ ೨೦೦೩ರಲ್ಲಿ ಪಂಜ ಜೂನಿಯರ್ ಕಾಲೇಜಿನ
ಪ್ರೌಢಶಾಲಾ ವಿಭಾಗಕ್ಕೆ ಶಿಕ್ಷಕರಾಗಿ ವರ್ಗಾವಣೆಗೊಂಡರು. ಇದೀಗ ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡ ಇವರು ಎಣ್ಮೂರು ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಟೈಟಸ್ ವರ್ಗಿಸ್ ರವರು ಜಿಲ್ಲಾ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


ಅಬ್ದುಲ್ ಖಾದರ್ : ಕಡಬದವರಾಗಿರುವ ಅಬ್ದುಲ್ ಖಾದರ್‌ರವರು ೧೯೯೪ರಲ್ಲಿ ಕುಂದಾಪುರದ ವಂಡ್ಸೆ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಇವರು, ೧೯೯೮ರಲ್ಲಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಗೊಂಡರು. ೨೦೨೩ ಜುಲೈಯಲ್ಲಿ ಕೊಣಾಲು ಸರಕಾರಿ ಪದವಿ ಪೂರ್ವಾ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಪದೋನ್ನತಿಗೊಂಡಿದ್ದು ಎಡಮಂಗಲ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿದ್ದಾರೆ.