ಗ್ರಾಮಜನ್ಯ ಶಾಖಾ ಕಛೇರಿ ಉದ್ಘಾಟನೆ

0

ಭಾರತ ಸರಕಾರದ ಸಣ್ಣ ರೈತರ ಕೃಷಿ – ವ್ಯಾಪಾರ ಒಕ್ಕೂಟ(SF AC) ಮತ್ತು ರಾಷ್ಟ್ರೀಯ ಜೇನು ಮಂಡಳಿ(NBB)ಯಿಂದ ಜೇನು ಕೃಷಿಯ ಅಧಿಕೃತ FPO ಎಂದು ಮಾನ್ಯತೆ ಪಡೆದ ದಕ್ಷಿಣ ಭಾರತದ ಪ್ರಪ್ರಥಮ ಸಂಸ್ಥೆ ಗ್ರಾಮಜನ್ಯ ಕಂಪನಿಯ ಶಾಖಾ ಕಛೇರಿ ಜ. 1ರಂದು ಪಂಜಿಗಾರಿನ PKJ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು. ಮುಪ್ಪೇರ್ಯ ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟಿನ ಅಧ್ಯಕ್ಷ ಮಂದಿರದ ಗುರುಸ್ವಾಮಿ ದಾಮೋದರ ಕಲ್ಕಳ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಗ್ರಾಮಜನ್ಯದ ಹೊಸ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿ ಅಧಿಕೃತ ವಿತರಕರಾದ ಬಾಲಕೃಷ್ಣರಿಗೆ ವಿತರಿಸಿದರು. ಗ್ರಾಮಜನ್ಯದ ನಿರ್ದೇಶಕರಾದ ಮೂಲಚಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು.


ಗ್ರಾಮಜನ್ಯದ ಬಾಳಿಲ ರೈತ ಆಸಕ್ತ ತಂಡದ ಸದಸ್ಯರಾದ ಕೆ.ವಿ ಶರ್ಮ ಬಾಳಿಲ ಶುಭಹಾರೈಸಿದರು.
ನಿರ್ದೇಶಕರಾದ ರಾಮ್ ಪ್ರತೀಕ್ ಕರಿಯಾಲ ವಂದಿಸಿದರು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ನಂದನ ಕೆ ಹಾಗೂ ಸಂಸ್ಥೆಯ ಸದಸ್ಯಮಿತ್ರರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ನೂತನ ಕಛೇರಿಯಲ್ಲಿ ಅತ್ಯತ್ತಮ ಗುಣಮಟ್ಟದ ಜೇನು ಹಾಗೂ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಜೇನು ಮೇಣದ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತದೆ. ಹಾಗೆಯೇ ಕೃಷಿಕರಿಗೆ ಮಾಹಿತಿ, ಸದಸ್ಯತ್ವ, ಜೇನು ಕೃಷಿಗೆ ಬೇಕಾದ ಪೆಟ್ಟಿಗೆ, ಜೇನುಕುಟುಂಬಗಳು ಹಾಗೂ ಪರಿಕರಗಳು ಮಾರಟಕ್ಕೆ ಲಭ್ಯವಿರುತ್ತದೆ.
ಕೃಷಿಕರಿಗೆ ವ್ಯವಸ್ಥಿತ ರೀತಿಯ ಜೇನು ಪೆಟ್ಟಿಗೆಯ ಮೇಲೆ ಹೂಡಿಕೆ ಮಾಡುವ ವಿನೂತನ ಲಾಭ ದಾಯಕ ಪದ್ದತಿಗಳು, ಒಪ್ಪಂದ ಆಧಾರಿತ ಜೇನು ಕೃಷಿ ಪದ್ದತಿಯು ಲಭ್ಯವಿರುತ್ತದೆ.