ಕುಕ್ಕುಜಡ್ಕ ವಿಷ್ಣುನಗರದ ವಿಷ್ಣುಮೂರ್ತಿ ದೈವದ ಒತ್ತೆಕೋಲ- ದೈವದ ಕುಳ್ಚಾಟ ವೀಕ್ಷಿಸಲು ಕಿಕ್ಕಿರಿದು ಸೇರಿದ ಭಕ್ತರು

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದ
ಶ್ರೀ ವಿಷ್ಣುಮೂರ್ತಿ,
ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ
ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಜ.3 ರಂದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಜರುಗಿತು.

ಬೆಳಗ್ಗೆಶ್ರೀ ವಿಷ್ಣುಮೂರ್ತಿ
ದೈವದ ಅಗ್ನಿಕುಂಡ
ಜೋಡಣೆಯ ಕಾರ್ಯವು ಭಾರತೀಯ ತೀಯ ಸಮಾಜ ಬಾಂಧವರು ನೆರವೇರಿಸಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಂದ ಚಿಣ್ಣರ ಹೆಜ್ಜೆ ಪ್ರದರ್ಶನವಾಯಿತು.

ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಇಳಿದು ಬಳಿಕ ಮೇಲೇರಿಗೆ ಅಗ್ನಿಸ್ಪರ್ಶವಾಯಿತು.

ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ವಾಯಿತು. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನರ್ತನ ಸೇವೆಯು ಅತ್ಯಂತ ಭಕ್ತಿ ಸಡಗರದಿಂದ ನಡೆಯಿತು. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಿಕ್ಕಿರಿದು ಭಕ್ತಗಣ ಆಗಮಿಸಿದ್ದರು. ಬಳಿಕ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಗಜೇಂದ್ರ ಮೋಕ್ಷ ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಬಯಲಾಟವು ಪ್ರದರ್ಶನವಾಯಿತು. ಮರುದಿನ ಪ್ರಾತ: ಕಾಲ ಶ್ರೀ ವಿಷ್ಣುಮೂರ್ತಿ ದೈವ ದ ಅಗ್ನಿ ಸೇವೆಯು ನಡೆಯಿತು.
ಆಡಳಿತ ಮಂಡಳಿಯ ವ್ಯವಸ್ಥಾಪಕರು ಎಂ.ಜಿ.ಸತ್ಯನಾರಾಯಣ ಹಾಗೂ ಮಂಡಳಿಯ ಸದಸ್ಯರುಉಪಸ್ಥಿತರಿದ್ದರು.

ಬೆಳಗ್ಗೆ
ಯಂ.ಪಿ.ಜಿ.ಕೆ ಯವರ ಅಶ್ವಥವೃಕ್ಷ ಪೂಜೆಯು ನಡೆದು ಮಾಯ್ಪಡ್ಕ ಮನೆಯಲ್ಲಿ ಕ್ಷೀರ ಸೇವನೆಯು ನಡೆಯಿತು.
ದೈವದ ಮಾರಿಕಳ ಪ್ರವೇಶ ವಾಗಿ ಒತ್ತೆಕೋಲ ಮಹೋತ್ಸವ ಸಮಾಪನಗೊಂಡಿತು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ದೈವದ ಮುಂದೆ ಹರಕೆ ಸಮರ್ಪಿಸಿ ದೈವದ ಪ್ರಸಾದ ಸ್ವೀಕರಿಸಿದರು.
ಶ್ರೀ ಮಹಾವಿಷ್ಣು ಭಜನಾ ಸಂಘದ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಗ್ರಾಮಸ್ಥರು, ಭಾರತೀಯ ತೀಯ ಸಮಾಜದ ಸದಸ್ಯರು ಸಹಕರಿಸಿದರು. ಎಲ್.ಇ.ಡಿ.ಪರದೆ ಅಳವಡಿಸಿ ದೈವದ ಕುಳ್ಚಾಟ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.