














ಸುಳ್ಯ ಮಾಣಿ ಮೈಸೂರು ಹೆದ್ದಾರಿಯ ಕಲ್ಚರ್ಪೆ ಸಮೀಪ ಇನೋವಾ ಕಾರು ಮತ್ತು ಟಾಟಾ ಏಸ್ ವಾಹನಗಳ ನಡುವೆ ಅಪಘಾತ ಸಂಭವಿಸಿ ಎರಡು ವಾಹನಗಳು ಜಖಂಗೊಂಡ ಘಟನೆ ಜನವರಿ 4 ರಂದು ರಾತ್ರಿ ಸಂಭವಿಸಿದೆ.

ಕಾಸರಗೋಡು ಮೂಲದ ನಿವಾಸಿಗಳು ತಮ್ಮ ಇನ್ನೋವಾ ಕಾರಿನಲ್ಲಿ ಸುಳ್ಯ ಮಾರ್ಗವಾಗಿ ಮಡಿಕೇರಿ ಹೋಗುತ್ತಿದ್ದ ಸಂದರ್ಭ ಕಲ್ಚರ್ಪೆಯಿಂದ ಬಂದು ಮುಖ್ಯ ರಸ್ತೆಗೆ ಇಳಿಯುತ್ತಿದ್ದ ಸುಳ್ಯ ಭಾಗದ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಸಂಭವಿಸಿದ್ದು ಘಟನೆಯಿಂದ ವಾಹನಗಳು ಜಖಂಗೊಡಿದ್ದು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.










