ಜಾಲ್ಸೂರು-ಅಡ್ಕಾರು: 5ನೇ ವಾರ್ಷಿಕ ಮಹ್ಲರತುಲ್ ಬದ್ರಿಯಾ ಮಜ್ಲೀಸ್ ಹಾಗೂ ಏಕದಿನ ಮತಪ್ರಭಾಷಣ

0

ದೈವ ಭಕ್ತಿ ಮತ್ತು ವಿಶ್ವಾಸ ಇದ್ದವರಿಗೆ ಎರಡೂ ಲೋಕದಲ್ಲಿ ವಿಜಯಿಸಲು ಸಾಧ್ಯ:ಡಾl ಫಾರೂಕ್ ನಈಮಿ

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಜಾಲ್ಸೂರು-ಅಡ್ಕಾರು ಇದರ ಆಶ್ರಯದಲ್ಲಿ ಐದನೇ ವಾರ್ಷಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಏಕದಿನ ಮತಪ್ರಭಾಷಣ ಕಾರ್ಯಕ್ರಮ ಜನವರಿ 20ರಂದು ಅಡ್ಕಾರು ಮುಹಿಯದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಮುಖ್ಯಪ್ರಭಾಷಣಕಾರಗಾಗಿ ಆಗಮಿಸಿದ್ದ ಖ್ಯಾತ ಪ್ರಭಾಷಣಕಾರ ಸಮಾಜ ಸೇವಕ ಡಾ l ಫಾರೂಕ್ ನಈಮಿ ಕೊಲ್ಲಂ ಮಾತನಾಡಿ ಇಸ್ಲಾಂ ಧರ್ಮ ಪವಿತ್ರ ಧರ್ಮವಾಗಿದ್ದು ಈ ಧರ್ಮದಲ್ಲಿರುವ ಪ್ರತಿಯೊಬ್ಬ ಮುಸಲ್ಮಾನನು ಭಗವಂತನ ಮೇಲೆ ಭಕ್ತಿ ಮತ್ತು ವಿಶ್ವಾಸವನ್ನಿಟ್ಟು ಈ ಲೋಕದಲ್ಲಿ ಜೀವಿಸಿದರೆ ಅವರಿಗೆ ಎರಡು ಲೋಕದಲ್ಲಿ ವಿಜಯ ಪ್ರಾಪ್ತಿಸಲು ಸಾಧ್ಯ.ಪರಸ್ಪರ ಸ್ನೇಹ ಮಯ ಜೀವನದೊಂದಿಗೆ ಸಮಾಜದಲ್ಲಿ ಪ್ರೀತಿಯನ್ನು ಪಸರಿಸಬೇಕು.ದ್ವೇಷ ಮತ್ತು ವೈಶ್ಯಮ್ಯದ ಜೀವನ ನಡೆಸುವವರ ಮೇಲೆ ಅಲ್ಲಾಹನ ಕೋಪವಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಬದ್ರಿಯಾ ಮಜ್ಲೀಸ್,ಹಾಗೂ ಮದ್ಹ್ ಆಲಾಪನೆ ನಡೆಯಿತು ಬಳಿಕ ಅಸ್ಸೈಯಿದ್ ಉಮ್ಮರ್ ಅಲ್ ಜಿಫ್ರಿ ಹನೀಫಿ ತಂಗಳ್ ದುವಾ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ ಜೆ ಎಂ ಅಡ್ಕಾರು ಖತೀಬರಾದ ಅಬ್ದುಲ್ ಅಜೀಝ್ ಬಾಖವಿ ನೆರವೇರಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕಮಿಟಿ ಅಧ್ಯಕ್ಷ ಉಸ್ಮಾನ್ ಜಿ ಎಂ ವಹಿಸಿದ್ದರು.


ವೇದಿಕೆಯಲ್ಲಿ ಕೆಎಂಜೆ ಚಾಲ್ಸೂರು ಅಧ್ಯಕ್ಷ ಅಬ್ಬಾಸ್ ಪೈಝಿ, ಎಸ್ ವೈ ಎಸ್ ಸಮಿತಿ ಅಧ್ಯಕ್ಷ ಅಶ್ರಫ್ ಮರಸಂಕ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಸುಳ್ಯ ರಿಜಿನಲ್ ಎಸ್ ಎಂ ಎ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಮೊಗರ್ಪಣೆ ಯುನಿಟ್ ಎಸ್ ವೈ ಎಸ್ ಅಧ್ಯಕ್ಷ ಯಾಕೂಬ್ ಸಅದಿ,ಜಮಾಅ
ತ್ ಕಮಿಟಿಯ ಪದಾಧಿಕಾರಿಗಳು, ಸ್ಥಳೀಯ ಮೊಅಲ್ಲಿಮರು ಉಪಸ್ಥಿತರಿದ್ದರು.
ಈ ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸ್ಥಳೀಯ ಮದರಸ ಪ್ರತಿಭೆಗಳನ್ನು ಗೌರವಿಸಲಾಯಿತು.
ಎಸ್ ವೈ ಎಸ್ ಅಧ್ಯಕ್ಷ ನೌಪಾಲ್ ಸಅದಿ ಜಲ್ಸೂರು ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಸಹ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.