ಸಹಕಾರಿ ಸಂಘದಿಂದ ಸಮಾಜದ ಋಣವನ್ನು ತೀರಿಸುವ ಅವಕಾಶ : ಎಸ್.ಅಂಗಾರ
ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ 3ನೇ ಶಾಖೆ ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು.ಸುಳ್ಯದ ಮಾಜಿ ಶಾಸಕರು,ಮಾಜಿ ಸಚಿವರಾದ ಎಸ್. ಅಂಗಾರ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವ್ಯಕ್ತಿಯ ಬೆಳವಣಿಗೆಯ ಹಿಂದೆ ಸಮಾಜದ ಋಣ ಇದೆ. ಸಮಾಜದ ಋಣ ತೀರಿಸಲು ಇಂತಹ ಒಳ್ಳೆಯ ಕೆಲಸ ಮಾಡಿದಾಗ ಸಮಾಜ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ ವಹಿಸಿ ಮಾತನಾಡಿ ಸುಳ್ಯದಲ್ಲಿ ಸಂಘದ 3ನೇ ಶಾಖೆ ಆರಂಭಗೊಂಡಿದ್ದು, ಸಂಸ್ಥೆಯ ಸದಸ್ಯತ್ವ ಹೊಂದಿ ಸಹಕಾರ ನೀಡಬೇಕು. ಮಾರ್ಚ್ ಅಂತ್ಯದವರೆಗಿನ ಸ್ಥಿರ ಠೇವಣಿಗಳಿಗೆ 1% ಹೆಚ್ಚುವರಿ ಬಡ್ಡಿ ಕೊಡುತ್ತೇವೆ. ಎಲ್ಲಾ ತರಹದ ಸಾಲಗಳನ್ನು ಕೊಡಲಾಗುವುದು ಎಂದು ಹೇಳಿದರು. ಶ್ರೀಹರಿ ಕಾಂಪ್ಲೆಕ್ಸ್ ನ ಮಾಲಕರಾದ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ , ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಂಗಾರು ನಿಂಗರಾಜು, ನಿರ್ದೇಶಕರುಗಳಾದ ರವೀಂದ್ರನಾಥ ಕೇವಳ, ಅಮರನಾಥ್ ಸುಳ್ಯಕೋಡಿ, ಶ್ರೀಮತಿ ಹುದೇರಿ ದೇವಕಿ,ಗಂಗಾಧರ ಗೌಡ ಕನ್ನಡ್ಕ, ರಾಧಾಕೃಷ್ಣ ಗುತ್ತಿಗಾರುಮೂಲೆ ,ಶ್ರೀಮತಿ ತಿಲೋತ್ತಮೆ ಕಲ್ಲುಮುಟ್ಲು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ಪೂಂಬಾಡಿ ತಮ್ಮಪ್ಪ ಗೌಡ ,ಕೆ.ವಿ.ಹೇಮನಾಥ, ಪದ್ಮಕೋಲ್ಚಾರ್,ಸಂತೋಷ್ ಜಾಕೆ,ಎನ್.ಎ. ಜ್ಞಾನೇಶ್, ಶ್ರೀನಿಧಿ ಕಾಯರ್ತೋಡಿ, ದೇವಿ ಪ್ರಸಾದ್ ಇಂಜಿನಿಯರ್ ,ಚಂದ್ರಹಾಸ ಕಾನತ್ತಿಲ, ಜತ್ತಪ್ಪ ರೈ ಮೊದಲಾದವರು ಇದ್ದರು.ಉಪಾಧ್ಯಕ್ಷರಾದ ನಿಂಗರಾಜು ನಂಗಾರು ವಂದಿಸಿದರು.ಸಂಸ್ಥೆಯ ವೈಶಿಷ್ಟ್ಯಗಳು;*ಪ್ರತೀ ತಿಂಗಳು 1ಲಕ್ಷದಿಂದ 10.50 ಲಕ್ಷದವರೆಗೆ ಸುಮಾರು 45 ಲಕ್ಷ ಮೊತ್ತದ 14 ಚಿಟ್ ಗಳು ಯಶಸ್ವಿಯಾಗಿ ಚಾಲ್ತಿಯಲ್ಲಿದೆ.
- ಸಂಘದಲ್ಲಿ ಅಡಮಾನ ಸಾಲ, ವಾಹನ ಸಾಲ, ಜಾಮೀನು ಸಾಲ, ಪಿಗ್ಮಿ ಠೇವಣಿ ಮೇಲೆ ಸಾಲಸೌಲಭ್ಯ ನೀಡಲಾಗುವುದು.
*ಶಾಖೆಯ ಶುಭಾರಂಭದ ಪ್ರಯುಕ್ತ ಸಾಮಾನ್ಯರಿಗೆ ಶೇ.9.5 ಹಾಗೂ ಹಿರಿಯ ನಾಗರಿಕರಿಗೆ ಶೇ.10.00 ಒಂದು ವರ್ಷದವರೆಗಿನ ಠೇವಣಿ ಮೇಲೆ 2024ರ ಮಾರ್ಚ್ ಅಂತ್ಯದವರೆಗೆ ಆಕರ್ಷಕ ಬಡ್ಡಿ ನೀಡಲಾಗುವುದು.
*ರೂ 100ರಿಂದ ಯಾವುದೇ ಮೊತ್ತದ ಪಿಗ್ಮಿ
*ಸತತ 6 ವರ್ಷಗಳಿಂದ 11% ಡಿವಿಡೆಂಡ್ ನೀಡಲಾಗುತ್ತಿದೆ.
*ಬೆಂಗಳೂರಿನಲ್ಲಿ ಮುಖ್ಯ ಕಚೇರಿ, ಕುಶಾಲನಗರ, ಮಡಿಕೇರಿ , ಸುಳ್ಯ ಸೇರಿ ಮೂರು ಶಾಖೆಗಳು
*12 ವರ್ಷಗಳು ಸಂದಿದ್ದು, ಪ್ರತಿವರ್ಷ ಲಾಭದಲ್ಲಿ ನಡೆಯುತ್ತಿದೆ.
*ಸುಮಾರು 2 ಸಾವಿರ ಸದಸ್ಯರಿದ್ದು, ವಾರ್ಷಿಕ ಸುಮಾರು 60 ಕೋಟಿ ವ್ಯವಹಾರ ನಡೆಯುತ್ತಿದೆ.