ಕೋಡ್ತಿಲು ಕುಟುಂಬದ ಶ್ರೀ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿ

0

ಐವರ್ನಾಡು ಗ್ರಾಮದ ಕೋಡ್ತಿಲ ಕುಟುಂಬದ ಶ್ರೀ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿ ಜ.27 ಹಾಗೂ 28 ರಂದು ನಡೆಯಿತು. ಜ.27 ರಂದು ಬೆಳಿಗ್ಗೆ ಗಣಹೋಮ .

ಹರಿಸೇವೆ ಮತ್ತು ನಾಗತಂಬಿಲ , ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಂಡಾರ ತೆಗೆದು ಕೊಲೆಭೂತ, ಕಲ್ಲುರ್ಟಿ, ರಕ್ತೇಶ್ವರಿ, ಪಿಲಿಭೂತ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ ದೈವಗಳ ನೇಮ ನಡಾವಳಿ ನಡೆಯಿತು.

ಜ.28 ರಂದು ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ , ಮಾರಿಕಳಕ್ಕೆ ಹೋಗುವುದು,ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ , ಅಪರಾಹ್ನ ಕೊಡಮಣಿತ್ತಾಯ, ಗುಳಿಗ, ಅಂಗಾರ ಬಾಕುಡ ದೈವಗಳ ನೇಮ ನಡಾವಳಿ ನಡೆಯಿತು.