ಸುಳ್ಯ ರಾಮ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಪೂರ್ವ ಭಾವಿ ಸಭೆ

0

ಸುಳ್ಯ ಶ್ರೀ ರಾಮ ಪೇಟೆಯಲ್ಲಿರುವ ಶ್ರೀ
ರಾಮ ಮಂದಿರದ ಪುನರ್ ಪ್ರತಿಷ್ಠಾಬ್ರಹ್ಮಕಲಶೋತ್ಸವವು ಫೆ.25 ರಿಂದ 28 ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಜ.31 ರಂದು ಭಜನಾ ಮಂದಿರದಲ್ಲಿ ನೆರವೇರಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರು,ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ
ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಿರಿಯ ಉದ್ಯಮಿ ಕೃಷ್ಣ ಕಾಮತ್ ರವರು ವಹಿಸಿದ್ದರು.
ರಾಮ ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಕೋಶಾಧಿಕಾರಿ ಡಾ.ಲೀಲಾಧರ್ ಕೆ.ವಿ, ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು ಸುಳ್ಯ, ಧರ್ಮದರ್ಶಿ ಮಂಡಳಿಯ ಸದಸ್ಯರಾದ ಮಹಾಬಲ ಕೇರ್ಪಳ, ಗೋಪಾಲ ನಡುಬೈಲು, ಭಾಸ್ಕರನ್ ನಾಯರ್, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ಅರಂಬೂರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ
ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಉಪ ಸಮಿತಿ ಸಂಚಾಲಕರು ಮತ್ತು ಸದಸ್ಯರು, ಮಹಿಳಾ ಸಮಿತಿ ಸಂಚಾಲಕರು ಮತ್ತು ಸದಸ್ಯರು,
ಶ್ರೀ ರಾಮ ಸಾಂಸ್ಕೃತಿಕ ಸಂಘದಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗಾಯಕಿ ಆರತಿ ಪುರುಷೋತ್ತಮ ಪ್ರಾರ್ಥಿಸಿದರು. ಆರ್ಥಿಕ ಸಮಿತಿ ಸಹ ಸಂಚಾಲಕ ಗೋಕುಲ್ ದಾಸ್ ಸ್ವಾಗತಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಕಾರ್ಯಕ್ರಮದ ವಿವರ ನೀಡಿದರು. ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು ರವರು ಆರ್ಥಿಕ ಕ್ರೋಢಿಕರಣದ ವ್ಯವಸ್ಥೆಯ ಬಗ್ಗೆ ತಿಳಿಸಿದರು. ಮಂಡಳಿಯ ಸದಸ್ಯ ಭಾಸ್ಕರನ್ ನಾಯರ್ ವಂದಿಸಿದರು.
ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.