ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆ ನೀಡಿದ ಸಚಿವರು
ಅಜ್ಜಾವರ ಗ್ರಾಮದ
ಮೇನಾಲ ಶಾಲೆಯಲ್ಲಿ 2022-23 ನೇ ಸಾಲಿನ ಅನುದಾನದಡಿಯಲ್ಲಿ ನಿರ್ಮಿಸಲಾದ ತರಗತಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಂಜಿತ್ ರೈ ಮೇನಾಲ ಹಾಗೂ ಮೇನಾಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೌಕತ್ ಅಲಿ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಉಸ್ತುವಾರಿ ಸಚಿವರ ಭೇಟಿ ಬಳಿಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ರನ್ನು ಕೂಡಾ ಭೇಟಿ ಮಾಡಿದ್ದಾರೆ.
ಜ. 30ರಂದು ಸಚಿವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಶಾಲಾ ಅಧ್ಯಕ್ಷರು ಹಾಗೂ ರಂಜಿತ್ ರೈಯವರು ಜ. 27ರಂದು ದಿನ ನಿಗದಿಯಾಗಿ ಬಳಿಕ ಮುಂದೂಡಲ್ಪಟ್ಟ ಘಟನೆಯನ್ನು ವಿವರಿಸಿದರೆಂದು ತಿಳಿದು ಬಂದಿದೆ.
ಸಚಿವರನ್ನು ಭೇಟಿಯಾಗಿರುವ ಕುರಿತು ಸುದ್ದಿಗೆ ವಿವರ ನೀಡಿದ ರಂಜಿತ್ ರೈಯವರು, ಜ.30ರಂದು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಶಾಲೆಯ ಕಾರ್ಯಕ್ರಮ ಮುಂದೂಡಿದ ಹಾಗು ಎಸ್.ಡಿ.ಎಂ.ಸಿ. ಯವರು ಉಸ್ತುವಾರಿ ಸಚಿವರಿದ್ದೇ ಕಾರ್ಯಕ್ರಮ ಮಾಡಲು ನಿರ್ಧರಿಸಿರುವ ಕುರಿತು ಸಚಿವರಿಗೆ ವಿವರಿಸಿದ್ದೇವೆ. ಶಾಲಾ ಅಧ್ಯಕ್ಷರು ಹಾಗೂ ನಮ್ಮ ಬೇಡಿಕೆಗೆ ಸಚಿವರು ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದಾರೆ. ಫೆ.9ರ ಬಳಿಕ ದಿನ ನಿಗದಿ ಪಡಿಸಿ ಬರುವುದಾಗಿ ಭರವಸೆ ನೀಡಿದ್ದಾರೆ. ಅವರ ಭೇಟಿಬಳಿಕ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ರನ್ನು ಕೂಡಾ ಭೇಟಿಯಾಗಿದ್ದೆವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಉಪಸ್ಥಿತರಿದ್ದರು.