ಕಾರ್ಕಳದಲ್ಲಿ “ಕರಾವಳಿ ನಾಡಿ ಯೂಟ್ಯೂಬ್ , ವೆಬ್ಸೈಟ್ ಲೋಕಾರ್ಪಣೆ”

0

ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯರಿಂದ ದೀಪ ಪ್ರಜ್ವಲನ, ಸಂತೋಷ್ ಹೆಗ್ಡೆಯವರಿಂದ ಯೂಟ್ಯೂಬ್ ಅನಾವರಣ

ಹರಿಹರಪಲ್ಲತಡ್ಕದ ಉದಯವಾಣಿ ಪತ್ರಿಕೆಯ ಮಾಜಿ ವರದಿಗಾರ ಬಾಲಕೃಷ್ಣ ಭೀಮಗುಳಿ ಸಂಪಾದಕತ್ವ

ಪ್ರಸ್ತುತಿ ಪಬ್ಲಿಷರ್ ಆಂಡ್ ಸರ್ವಿಸಸ್ ಕಾರ್ಕಳ ಇದರ ನೂತನ ಕಾರ್ಯಾಲಯದ  ಉದ್ಘಾಟನೆ ಹಾಗೂ ಕರಾವಳಿ ನಾಡಿ ಯೂಟ್ಯೂಬ್, ವೆಬ್‌ಸೈಟ್ ತಾಣ ಅನಾವರಣ ವನ್ನು ಜೈನ ಮಠದ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಮಾ. 30 ರಂದು ಚಾಲನೆ ನೀಡಿದರು.

ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಯೂಟ್ಯೂಬ್ ಅನಾವರಣಗೊಳಿಸಿದರು.


ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ, ಉದ್ಯಮಿ, ಇಂಜಿನಿಯರ್ ಪ್ರಮಲ್ ಕುಮಾರ್,
ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ತ್ ಎಸ್ . ಎಲ್. ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ಅತಿಥಿಗಳಾಗಿದ್ದರು.

ಯೂಟ್ಯೂಬ್, ವೆಬ್ ತಾಣದ ಪ್ರಧಾನ ಸಂಪಾದಕ ಬಾಲಕೃಷ್ಟ ಭೀಮಗುಳಿ ಪ್ರಸ್ತಾವನೆಗೈದರು. ಇದೇ ಸಂದರ್ಭದಲ್ಲಿ ಹರಿಹರ ಪಲ್ಲತಡ್ಕದ ಸಚಿನ್ ಕ್ರಿಕೆಟರ್ಸ್ ತಂಡ ಹಮ್ಮಿಕೊಂಡ ಅಂಬುಲೆನ್ಸ್ ಸೇವೆಗೆ ಕರಾವಳಿ ನಾಡಿ ವತಿಯಿಂದ ಧನಸಹಾಯ ವಿತರಿಸಲಾಯಿತು.
ದಾಮೋದರ ಶರ್ಮಾ ನಿರೂಪಿಸಿದರು.ಕರಾವಳಿ ನಾಡಿಯ ಪ್ರಮುಖರು ಉಪಸ್ಥಿತರಿದ್ದರು.