ಎಣ್ಮೂರು 16ನೇ ಸ್ವಲಾತ್ ವಾರ್ಷಿಕ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

0

ಧಾರ್ಮಿಕ ಭೊದನೆಯನ್ನು ಆಲಿಸಿದರೆ ಸಾಲದು ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು :ಮಾಣಿ ಉಸ್ತಾದ್

ರಿಫಾಯಿಯ್ಯಾ ಜುಮ್ಮಾ ಮಸೀದಿ ಎಣ್ಮೂರ್ ಮುಚ್ಚಿಲ ಇದರ ವಠಾರದಲ್ಲಿ ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಎಣ್ಮೂರ್ ನೇತ್ರತ್ವ 16ನೇ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜ.30 ರಂದು ನಡೆಯಿತು.


ಸ್ವಲಾತ್ ವಾರ್ಷಿಕ ಕಾರ್ಯಕ್ರಮ ವನ್ನು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಎಲ್ಲರೂ ಬಹಳ ಒಳ್ಳೆಯವರೆ ಒಂದೇ ಒಂದು ದಾರ್ಮಿಕ ಮತಪ್ರವಚನ ಕಾರ್ಯಕ್ರಮವನ್ನು ಬಿಡುವುದಿಲ್ಲ ಎಲ್ಲರೂ ವೇದಿಕೆಯಲ್ಲಿ ವೇದಿಕೆಯ ಮುಂಭಾಗದಲ್ಲಿ ಕುಳಿತು ನಾವು ಕೊಡುವುಂತಹ ನಸಿಹತ್ (ಪ್ರವಚನ)ವನ್ನು ಆಲಿಸುತ್ತಾತರೆ ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಅದನ್ನು ಪಾಲಿಸುತ್ತಾರೆ ಉಳಿದವರು ಸಭಾಂಗಣದಿಂದ ಹೊರ ನಡೆಯುವಾಗ ಅದನ್ನು ಮರೆತು ಬಿಡುತ್ತಾರೆ ಅದು ಬಹಳ ಖೇಧಕರ ಎಂದವರು ಹೇಳಿದರು.


ನಂತರ ಮಾತನಾಡಿದ ಸಯ್ಯದ್ ತಂಙಳ್ ” ಈಗ ಕಾಲ ಬದಲಾಗಿದೆ ಯಾವುದೇ ಕಾರ್ಯಕ್ರಮವು ನಡೆಯುವ ಸ್ಟೇಜ್ ನಲ್ಲಿ ಅತಿಥಿಗಳು ಪಂಡಿತರು ಉಲಮಾಗಳು ಉಮಾರಗಳು ಎಲ್ಲರೂ ಇರುತ್ತಾರೆ ಆದರೆ ಅವರವರಿಗೆ ಕೊಡಬೇಕಾದ ಗೌರವವು ಈಗ ಇಲ್ಲದಂತಾಗಿದೆ ಎಲ್ಲರಿಗೂ ವೇದಿಕೆ ಬೇಕು ಎಲ್ಲರಿಗೂ ಸ್ಥಾನ ಬೇಕು ಎಲ್ಲರಿಗೂ ಎಲ್ಲವೂ ಬೇಕು ಏನೇ ಇರಲಿ ಹಿರಿಯರಿಗೆ ಗೌರವವನ್ನು ಕೊಟ್ಟು ಕುಳಿತುಕೊಳ್ಳುವ ಅಭ್ಯಾಸವನ್ನು ರೂಡಿಸಿಕೊಳ್ಳಿ ಎಂದವರು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ನೀಡಿದರು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಇಬ್ನು ಮೌಲ ತಂಙಳ್ ದುವಾಶಿರ್ವಚನ ಮಾಡಿದರು. ಕುಂಞಿ ಕೋಯ ತಂಙಳ್ ಸಹದಿ,ದಾರುಲ್ ಹುದಾ ತಂಬಿನಮಕ್ಕಿಯ ಹಾಮೀದ್ ತಂಙಳ್,ಅಬೂಭಕ್ಕರ್ ಬಾಖವಿ,ಮಹಮೂದ್ ಸಖಾಪಿ,ಕೊಯಮ್ಮ ತಂಙಳ್, ಶುಭ ಹಾರೈಸಿದರು.


ಎಬಿ ಅಶ್ರಫ್ ಸಹದಿ,ಮೂಸಾ ಹಾಜಿ ಜಿರ್ಮಖಿ,ಇಸಾಕ್ ಹಾಜಿ ಪಾಜಪಳ್ಳ, ಕುಂಬ್ರ ಮರ್ಕಝ್ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ,ಮಾಜಿ ತಾ.ಪಂ ಸದಸ್ಯ ಗಪೂರ್ ಕಲ್ಮಡ್ಕ,ಯೂಸುಫ್ ಹಾಜಿ ಕೈಕಾರ,ಇಸ್ಮಾಯಿಲ್ ಪಡ್ಪಿನಂಗಡಿ, ಶರೀಫ್ ಹಿಮಮಿ ಕಕ್ಕಿಂಜೆ ಮೊದಲಾದ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
ಸಲಾಹುದ್ದೀನ್ ಸಖಾಫಿ ಸ್ವಾಗತಿಸಿ ವಂದಿಸಿದರೂ.
ಕಾರ್ಯಕ್ರಮದಲ್ಲಿ ಬುರ್ದಾ ಮಜ್ಲೀಸ್ ನಡೆಯಿತು.
ಆಗಮಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಕೊನೆಯಲ್ಲಿ ತಬರೂಕ್ ವಿತರಣೆ ನಡೆಯಿತು.
ಇದೇ ವೇದಿಕೆಯಲ್ಲಿ ಮೂರು ಜೋಡಿ ನಿಖಾಹ್ ಕಾರ್ಯಕ್ರಮವು ನಡೆಯಿತು.