ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ತಮಿಳುನಾಡಿನ ಪಳಯಂಕೊಟೈಯಲ್ಲಿ ಫೆ.2ರಿಂದ 4ರವರೆಗೆ ಜರುಗಿದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅರಂತೋಡು ಗ್ರಾಮದ ಉಳುವಾರಿನ ಶ್ರೀಮತಿ ರಮ್ಯ ಪವನ್ ಅವರು ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.










ತಮಿಳುನಾಡಿನ ಅಣ್ಣ ಸ್ಟೇಡಿಯಂನಲ್ಲಿ ಜರುಗಿದ ರಾಷ್ಟ್ರಮಟ್ಟದ ಕ್ರೀಡಾಕೂಟದ ಡಿಸ್ಕಸ್ ತ್ರೋ ಮತ್ತು ಹ್ಯಾಮರ್ ನಲ್ಲಿ ಪ್ರಥಮ ಸ್ಥಾನ, ಶಾಟ್ ಪುಟ್ ಮತ್ತು ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಸ್ವೀಡನ್ ನಲ್ಲಿ ಜರುಗಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.









