ಸುಣ್ಣಮೂಲೆ ಎಸ್.ಕೆ.ಎಸ್.ಎಸ್ ಎಸ್.ಎಫ್. ಶಾಖೆ ಮಹಾಸಭೆ – ನೂತನ ಸಮಿತಿ ರಚನೆ

0

ಕನಕಮಜಲು ಗ್ರಾಮದ ಸುಣ್ಣಮೂಲೆ ಎಸ್.ಕೆ.ಎಸ್.ಎಸ್.ಎಫ್. ಶಾಖೆಯ ಮಹಾಸಭೆಯು ಸುಣ್ಣಮೂಲೆ ಶಾಖಾ ಕಚೇರಿಯಲ್ಲಿ ಜರುಗಿತು.
ದುವಾಕಾರ್ಯವನ್ನು ಅಕ್ಬರ್ ಕರಾವಳಿ ನೆರವೇರಿಸಿದರು. ಶಾಖಾ ಕಾರ್ಯದರ್ಶಿ ರಂಶಾದ್ ಅವರು ಶಾಖಾ ವರದಿ ವಾಚಿಸಿದರು. ಕೋಶಾಧಿಕಾರಿ ರಾಶಿದ್ ಎನ್.ಎಸ್. ಖರ್ಚು ವೆಚ್ಚದ ಪಟ್ಟಿಯನ್ನು ವಾಚಿಸಿದರು.

ನಂತರ ನಡೆದ ಸಭೆಯಲ್ಲಿ 2024/26ನೆ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ರಫೀಕ್ ಮೂಲೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬೂಸಾಲಿ ಎಸ್.ಎ. ಹಾಗೂ ಕೋಶಾಧಿಕಾರಿಯಾಗಿ ಹಕೀಮ್ ಬಿ.ಕೆ. ಆಯ್ಕೆಯಾದರು.


ಶಾಖಾ ಉಪಾಧ್ಯಕ್ಷರಾಗಿ ಶಿಯಾಬ್ ಕೆ.ಸಿ. ಸಫ್ವಾನ್ ಕಂಚಿಲ್ಪಾಡಿ.ಜೊತೆ ಕಾರ್ಯದರ್ಶಿಯಾಗಿ ಸ್ವಾದಿಕ್ ಕೆ‌.ಇ. ಕಂಚಿಲ್ಪಾಡಿ ಮತ್ತು ರಾಶಿದ್ ಎನ್.ಎಸ್. ವರ್ಕಿಂಗ್ ಸೆಕ್ರೆಟರಿಯಾಗಿ ರಂಶಾದ್ ಎಸ್.ಎಂ. ಆಯ್ಕೆಯಾದರು.


ಶಾಖಾ ಸದಸ್ಯರಾಗಿ ಮಕ್ಸುದ್ ಇ.ಕೆ., ಅಪ್ಸಲ್ ಎನ್.ಎಸ್., ಹಫೀಜ್ ಅಪ್ಪಿ, ಜುನೈದ್ ಕೆ.ಎಂ. ಫಝಲ್ ಎಸ್.ಎಂ, ನೌಫಲ್ ಕೆ.ಯು. ಮುರ್ಶಿದ್ ಎಸ್.ಎಂ. ಆಯ್ಕೆಯಾದರು.
ಸುಳ್ಯ ಕ್ಲಸ್ಟರ್ ಕೌನ್ಸಿಲರ್ ಆಗಿ ಅಬೂಬಕ್ಕರ್ ಪೂಪಿ, ಇಕ್ಬಾಲ್ ಎಸ್.ಎ., ಮೊಯಿದಿನ್ ಇ.ಕೆ., ಯೂಸುಫ್ ಎಸ್.ಎಂ., ಅಬ್ದುಲ್ಲ ಕೆ.ಎಸ್. ಸುಣ್ಣಮೂಲೆ, ಸಫ್ವಾನ್ ಕಂಚಿಲ್ಪಾಡಿ, ರಾಂಶದ್ ಎಸ್.ಎಂ., ಹಾಗೂ ಶಾಖಾ ಶಿಕ್ಷಣ ಪ್ರತಿನಿಧಿಯಾಗಿ ಇಕ್ಬಾಲ್ ಎಸ್.ಎ., ಆಯ್ಕೆಗೊಂಡರು.


ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ಸುಳ್ಯವಲಯದ ಪ್ರಭಾರಿಗಳಾದ ಅಕ್ಬರ್ ಕರಾವಳಿ, ಪುತ್ತೂಚ್ಚ, ಶಹೀದ್ ಪಾರೆ ನೆರವೇರಿಸಿದರು. ಅಬೂಬಕ್ಕರ್ ಪೂಪಿ ಸ್ವಾಗತಿಸಿ ವಂದಿಸಿದರು.