ಸಂಕೇಶ್ ಪೇರಾಲಿನಲ್ಲಿ ನಬಿ ಕೀರ್ತನೆಯೊಂದಿಗೆ ನಡೆದ ಸಯ್ಯಿದ್ ಆಟ್ಟು ತಂಙಳ್ ಆಂಡ್ ನೇರ್ಚೆ

0

ಸಂಕೇಶ್ ಸ್ವಲಾತ್ ಮಜ್ಲಿಸ್ ನೂರಾರು ಬಡ ರೋಗಿಗಳಿಗೆ ಶಮನ ಕೇಂದ್ರ : ವಾಗ್ಮಿ ಆಬಿದ್ ಹುದವಿ ತಚ್ಚನ್ನ

ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ಅಬ್ದುಲ್ ಕುಂಞಿ ಸಂಕೇಶ್ ರವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಆಟ್ಟು ಉಪ್ಪಾಪ ಸ್ವಲಾತ್ ಮಜ್ಲಿಸ್ ವತಿಯಿಂದ ಸಯ್ಯದ್ ಆಟ್ಟು ತಂಙಳ್ ಆಂಡ್ ನೇರ್ಚೆ ಫೆಬ್ರವರಿ 19 ರಂದು ಪೇರಾಲಿನಲ್ಲಿ ನಡೆಯಿತು.

ಸಂಜೆ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲೀಸ್ ನಡೆದು ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಜ್ಲಿಸ್ ಸ್ಥಾಪಕಾಧ್ಯಕ್ಷ ಅಬ್ದುಲ್ ಕುಂಞಿ ಸಂಕೇಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಬ್ದುಲ್ ಅಝೀಝ್ ಸಖಾಫಿ ಕೇರಳ,ಹಾಫಿಲ್ ನಿಝಾಮ್ ಕೇರಳ,ನ್ಯಾಯವಾದಿ ಸುಕುಮಾರ್ ಕೋಡ್ತುಗುಳಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾನಂದ ಮಾವಜಿ, ಮಹಮ್ಮದ್ ಸ್ವಲಾಹುದ್ದೀನ್ ರಹ್ಮಾನಿ ಮಲಪುರಂ, ವೈದ್ಯಕೀಯ ವಿದ್ಯಾರ್ಥಿ ನಿಹಾಲ್ ಕೋಡ್ತುಗುಳಿ ರವರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ ಈ ಆಧ್ಯಾತ್ಮಿಕ ಕೇಂದ್ರದಿಂದ ಬೇರೆ ಬೇರೆ ಕಾಯಿಲೆಗಳಿಂದ ಗುಣಮುಖರಾದ ರೋಗಿದಳ ಕುರಿತು ಮತ್ತು ಇಲ್ಲಿ ತಮಗೆ ಆದ ಅನುಭವಗಳ ಬಗ್ಗೆ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಪ್ರ ಭಾಷಣಕಾರರಾಗಿ ಭಾಗವಹಿಸಿದ್ದ ಕೇರಳದ ಸುಪ್ರಸಿದ್ಧ ವಾಗ್ಮಿ ಆಬಿದ್ ಹುದವಿ ತಚ್ಚನ್ನ ಮಾತನಾಡಿ ಈ ಕೇಂದ್ರವು ನೂರಾರು ಬಡ ರೋಗಿಗಳಿಗೆ ರೋಗ ಶಮನ ಕೇಂದ್ರವಾಗಿದ್ದು ಇಲ್ಲಿ ಮಹಾತ್ಮರ ಕಾರ್ಣಿಕ ಇರುವ ಸ್ಥಳವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸುಳ್ಯದ ಉದ್ಯಮಿ ಹಾಜಿ ಆದಂ ಕಮ್ಮಡಿ,ಹಾಸನ ಜಿಲ್ಲೆ ನಿವೃತ್ತ ಡಿಜಿಪಿ ರವರ ಸಹಾಯಕ ನುಸರತ್ ಸಿರಾಜ್,ಮಂಗಳೂರು ಫಾದರ್ ಮಲ್ಲರ್ ಆಸ್ಪತ್ರೆಯ ವೈದ್ಯ ಡಾ. ಮಹಮ್ಮದ್, ಹಿರಿಯರಾದ ಹಾಜಿ ಇಬ್ರಾಹಿಂ ಸಂಕೇಶ್, ಅಬ್ದುಲ್ಲಾ ಹಾಜಿ ಜಯನಗರ, ಅಂದುಂಞಿ ಗೋರಡ್ಕ, ಸುದ್ದಿ ಪತ್ರಿಕೆ ವರದಿಗಾರ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

ವಕೀಲರಾದ ಮೂಸ ಕುಂಞಿ ಪೈಂಬೆಚ್ಚಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಧ್ಯಾತ್ಮಿಕ ಚಿಕಿತ್ಸೆ ಕಾರ್ಯಕ್ರಮ ನಡೆಯಿತು.


ಕೇರಳ ಕೋಝಿಕೊಡು, ಮಲಪುರಂ,ಹಾಸನ,ಬೆಂಗಳೂರು, ಉಡುಪಿ,ಕೊಡಗು,ದಕ್ಷಿಣ ಕನ್ನಡ ಜಿಲ್ಲೆ ಮುಂತಾದ ಭಾಗಗಳಿಂದ ನೂರಾರು ಮಂದಿ ಸಂಸ್ಥೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.