ಮರ್ಕಂಜ ಗ್ರಾಮ ಪಂಚಾಯತ್ ಗ್ರಾಮಸಭೆ

0

ಮರ್ಕಂಜ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಮರ್ಕಂಜ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ರವರು ನೋಡೆಲ್ ಅಧಿಕಾರಿಯಾಗಿದ್ದರು.

ಗ್ರಾ.ಪಂ.ಅಧ್ಯಕ್ಷೆ ಗೀತಾ‌ ಹೊಸೊಳಿಕೆ ಅಧ್ಯಕ್ಷತೆ ವಹಿಸಿದ್ದರು.

ಸಿಬ್ಬಂದಿ ನೇತ್ರಾವತಿಯವರು ವರದಿ ಮಂಡಿಸಿದರು.

ಬಳಿಕ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ‌

ಮೆಸ್ಕಾಂ ಇಲಾಖೆಯಿಂದ ಮಾಹಿತಿ ನೀಡುತ್ತಿದ್ದಾಗ ಗ್ರಾ.ಪಂ. ಸದಸ್ಯ ಗೋವಿಂದ ಅಳವುಪಾರೆ ಯವರು ಪ್ರಶ್ನಿಸಿ ಬೆಳಿಗ್ಗೆ ಮತ್ತು ಸಂಜೆ ಪವರ್ ಕಟ್ ಮಾಡಬಾರದು.‌ ಇದರಿಂದ ಮಹಿಳೆಯರು, ವಿದ್ಯಾರ್ಥಿ ಗಳು ಬಹಳಷ್ಟು ಕಷ್ಟ ಪಡುತ್ತಾರೆ ಎಂದು ಗಮನ ಸೆಳೆದರು.‌

ಅದಕ್ಕುತ್ತರಿಸಿದ ಮೆಸ್ಕಾಂ‌ ಅಧಿಕಾರಿಗಳು ಸ್ಟೇಷನ್ ನಲ್ಲಿ ಲೋಡ್ ಹೆಚ್ಚಾದಾಗ ಟ್ರಿಪ್ ಆಗುತ್ತದೆ. ಈ ಬಗ್ಗೆ ಸ್ಟೇಷನ್ ನೆ ಹೇಳಿ ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದರು.‌

ಕಂದಾಯ ಅಧಿಕಾರಿಗಳು ಮಾಹಿತಿ‌ ನೀಡುತ್ತಿದ್ದಾಗ ಮೋನಪ್ಪ ಪೂಜಾರಿ ಹೈದಂಗೂರು ಪ್ರಶ್ನಿಸಿ ಪಂಚಾಯತ್ ನಲ್ಲಿ ಪ್ಲಾಟಿಂಗ್ ಸಮಸ್ಯೆ ಸಾಕಷ್ಟು ಸಮಯದಿಂದ ಇದೆ.‌ ಇದಕ್ಕೆ ಗ್ರಾ.ಪಂ. ವತಿಯಿಂದ ಜಿಲ್ಲಾಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ ಜನಸಂಪರ್ಕ ಸಭೆ ಮಾಡಿ, ಆಗ ಕಂದಾಯ ಇಲಾಖೆಯ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು. ಆಗ ಮೀನಾಕ್ಷಿ ಬೊಮ್ಮೆಟ್ಟಿ ಯವರು ಮಾತನಾಡಿ‌ ಮೊನ್ನೆ ಮುಡ್ನೂರು ಶಾಲೆಗೆ ಎ.ಸಿ.ಯವರು ಬಂದಿದ್ದಾಗ ನಾವು ನಮ್ಮ‌ ಮರ್ಕಂಜ ಗ್ರಾಮದಲ್ಳಿ ಗ್ರಾಮವಾಸ್ತವ್ಯ ಮಾಡುವ ಬಗ್ಗೆ ಮನವಿ ಮಾಡಿದ್ದೆವು. ಅದಕ್ಕೆ ಅವರು‌ ಒಪ್ಪಿದ್ದಾರೆ.‌ ಅದನ್ನೇ ಪಂಚಾಯತ್ ಮೂಲಕವೇ ಮಾಡುವ ಎಂದರು.

ಅರಣ್ಯಾ ಇಲಾಖೆಯಿಂದ ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು, ತಮ್ಮಲ್ಲಿ ಹಳೆಯ ಕಾಡು ಪ್ರಾಣಿಗಳ ಅಂಗಾಗಳು ಇದ್ದರೆ ಅದನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಅವಕಾಶವಿದೆ. ಈಗ ವರ್ಗಾಯಿಸದೇ ಇದ್ದು‌, ಪತ್ತೆಯಾದರೆ, ಶಿಕ್ಷೆ ಗೊಳಪಡಬೇಕಾಗುತ್ತದೆ ಎಂದರಲ್ಲದೇ, ನೀರಿನ‌ ಮೂಲವೇ ಕಾಡು.‌ ಹೀಗಾಗಿ ಕಾಡಿಗೆ ಕಸ ಹಾಕುವುದು, ಬೇಟೆಯಾಡುವುದು, ಕಾಡಿಗೆ ಬೆಂಕಿ ಹಾಕುವುದು ಮಾಡಬೇಡಿ.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸಂಧ್ಯಾ ಪಾರೆಮಜಲು, ಸೇವಾಜೆ, ಸದಸ್ಯರಾದ ಗೋವಿಂದ ಅಳವುಪಾರೆ, ಸದಸ್ಯರಾದ ಗೋವಿಂದ ಅಳವುಪಾರೆ, ಕಟ್ಟಕ್ಕೋಡಿ, ರಮತಾ ಕುದ್ಕುಳಿ, ಪವಿತ್ರ ಗುಂಡಿ, ಯಶವಂತ ಸೂಟೆಗದ್ದೆ, ರಾಜೇಂದ್ರ ಕೊಚ್ಚಿ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಧರ ಕೆ.ಎನ್. ಸ್ವಾಗತಿಸಿ ಸದಸ್ಯ ಚಿತ್ತರಂಜನ್ ಕಟ್ಟಕೋಡಿ ವಂದಿಸಿದರು.