ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ದುಬೈ ಪ್ರವಾಸಕ್ಕೆ ಸುಳ್ಯದಲ್ಲಿ ಬೀಳ್ಕೊಡುಗೆ

0

ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಕೆ ಪಿ ಸಿ ಸಿ ವಕ್ತಾರ ಟಿ ಎಮ್ ಶಹೀದ್ ರವರು ಫೆ. 23 ರಂದು ದುಬಾಯಿಗೆ ವಿದೇಶ ಪ್ರಯಾಣ ಬೆಳೆಸಿದ್ದು ಅವರನ್ನು ಸುಳ್ಯದ ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ ರವರ ನಿವಾಸದಲ್ಲಿ ಬೀಳ್ಕೊಡುಗೆ ಮಾಡಲಾಯಿತು.

ಶಹೀದ್ ರವರು ದುಬಾಯಿ ಅಲ್ ಮಂಝಾ ಸ್ಟೇಡಿಯಂನಲ್ಲಿ ನಡೆಯುವ ತೆಕ್ಕಿಲ್ ಪ್ರವಾಸಿ ಒಕ್ಕೂಟ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಯು ಎ ಇ ಯ ವಿವಿಧ ನಗರಗಳಲ್ಲಿ ನಡೆಯುವ ಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬೀಳ್ಕೊಡುಗೆ ಸಮಾರಂಭದಲ್ಲಿ ಸುಳ್ಯದ ಮುಖಂಡರುಗಳಾದ ಹಾಜಿ ಮುಸ್ತಫ ಜನತಾ, ಹಾಜಿ ಅಬ್ದುಲ್ ರಜಾಕ್ ರಾಜಧಾನಿ, ಅಡ್ವಕೇಟ್ ಮೂಸಾ ಪೈಂಬೆಚಾಲು, ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ ಸೇರಿದಂತೆ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.