ಬಳ್ಪ ಶಾಲೆಗೆ ಊಟದ ತಟ್ಟೆ ಇಡುವ ಸ್ಟಾಂಡ್ ಕೊಡುಗೆ

0

ಬಳ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿವಂಗತ ಭಾಸ್ಕರ ಪೂಜಾರಿ ಪಡ್ಕಿಲಾಯ ಇವರ ಸ್ಮರಣಾರ್ಥ ಇವರ ಪತ್ನಿ ಶ್ರೀಮತಿ ಸುಂದರಿ ಹಾಗೂ ಮಗಳು ಈ ಶಾಲೆಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಕಸ್ತೂರಿ ಶಾಂತಪ್ಪ ಪೂಜಾರಿ ಇವರು 18,000 ಮೌಲ್ಯದ ಮಕ್ಕಳ ಬಿಸಿಯೂಟಕ್ಕೆ ಊಟದ ತಟ್ಟೆ ಇಡುವ ಸ್ಟಾಂಡ್ ಮತ್ತು 7,000 ಮೌಲ್ಯದ ಗೋಡೆ ಬರಹವನ್ನು ಕೊಡುಗೆಯಾಗಿ ನೀಡಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿರುತ್ತಾರೆ.
ಇವರನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು..