ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಬ್ರೇಕಿಂಗ್ ದ ನ್ಯೂಸ್: ದ ಆರ್ಟ್ ಆಫ್ ಕಮ್ಯುನಿಕೇಶನ್ ಕಾರ್ಯಗಾರ

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೌಖಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ತರಭೇತಿ ಶಿಬಿರದ ಭಾಗವಾಗಿ ಬ್ರೇಕಿಂಗ್ ದ ನ್ಯೂಸ್ : ದ ಆರ್ಟ್ ಆಫ್ ಕಮ್ಯುನಿಕೇಶನ್ ಕಾರ್ಯಗಾರವನ್ನು ೨೮ ಫೆಬ್ರವರಿ ೨೦೨೪ ರಂದು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಯನ್.ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ, ನಿಟ್ಟೆ, ಇದರ ಕೌನ್ಸೆಲರ್ ಅಂಕಿತ್ ಯಸ್. ರವರು ಭಾಗವಹಿಸಿ, ರೋಗಿಗಳೊಂದಿಗೆ ಸಮಾಲೋಚನೆಯ ಮಹತ್ವ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಕಾರ್ಯಗಾರ ನಡೆಸಿದರು.


ಕಾರ್ಯಕ್ರಮವು ವಿದಾರ್ಥಿಗಳ ಪ್ರಾರ್ಥನೆಯೊಂದಿಗೆ ಅರಂಭಗೊಂಡಿತು. ವಿಭಾಗ ಮುಖ್ಯಸ್ಥೆ ಡಾ. ಶೈಲ ಯಂ. ಪೈ ರವರು ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿದರು.
ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿ National Education Policy ಯ ಕುರಿತು ಮಾಹಿತಿ ನೀಡಿ ಕಲಿಕಾ ಕಾರ್ಯಗಾರದ ಮಹತ್ವ ವಿವರಿಸಿದರು.

ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್‌ರವರು ಪ್ರಾಸ್ತವಿಕ ಮಾತನಾಡಿ ಶುಭಹಾರೈಸಿದರು. ದಂತ ಮಹಾವಿದ್ಯಾಲಯದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.Natonal Oral Pathologist Day 2024 ಅಂಗವಾಗಿ ವಿದ್ಯಾರ್ಥಿಗಳಿಗೆ ರಂಗೋಲಿ, ಕಾರ್ವಿಂಗ್, ಮೊಡೆಲ್ ಮೇಕಿಂಗ್ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಭಾಗದಲ್ಲಿ ಉತ್ತಮ ಶೈಕ್ಷಣಿಕ ಶ್ರೇಷ್ಠತೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಡಾ. ಸುಪ್ರೀಯ ಹೆಚ್. ರವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಅನಿತಾ ದಯಕರ್ ರವರು ನೀಡಿದರು. ಡಾ. ಚೈತನ್ಯ ಹಾಗೂ ವಿಭಾಗ ಸಿಬ್ಬಂದಿ ಸಹಕರಿಸಿಕರು.