ಪಂಜ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಸರಕಾರದಿಂದ ತಡೆ

0

ತಡೆ ತೆರವಿಗೆ ಹೈಕೋರ್ಟ್ ಮೆಟ್ಟಿಲೇರಿದ ವ್ಯ.ಸಮಿತಿ ಅಧ್ಯಕ್ಷರು

ಪಂಜದ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ನೇಮಿಸಿ, ಬಳಿಕ ಅದಕ್ಕೆ ಸಚಿವರ ನಿರ್ದೇಶನದಂತೆ ತಡೆ ನೀಡಿದ ಧಾರ್ಮಿಕ ದತ್ತಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಡಾ.ಕಾನತ್ತೂರ್ ರವರ ದೂರರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್ ಯಥಾಸ್ಥಿತಿ ಪಾಲನೆಗೆ ಆದೇಶ ಮಾಡಿದೆಯಲ್ಲದೆ ವಿಚಾರಣೆಯನ್ನು ಮಾ.21 ಕ್ಕೆ ಮುಂದೂಡಿದೆ.
ಪಂಜ ಸೀಮೆ ದೇವಸ್ಥಾನಕ್ಕೆ ಡಾ.ದೇವಿಪ್ರಸಾದ್ ಕಾನತ್ತೂರು ಸೇರಿದಂತೆ ಇತರರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಿಸಿ, ಧಾರ್ಮಿಕ ದತ್ತಿ ಆಯುಕ್ತರು ಆದೇಶ ಮಾಡಿದ್ದರು. ಈ ಆದೇಶದ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡ ಸದಸ್ಯರು ಸಭೆ ಸೇರಿ ಸಮಿತಿ ಅಧ್ಯಕ್ಷರನ್ನಾಗಿ ಡಾ.ಕಾನತ್ತೂರುರನ್ನು ಆರಿಸಿ, ಅಧಿಕಾರ ಸ್ವೀಕಾರ ಮಾಡಿದ್ದರು.


ಆದರೆ ಎರಡೇ ದಿನದಲ್ಲಿ ಆಯುಕ್ತರು ಇನ್ನೊಂದು ಆದೇಶ ಹೊರಡಿಸಿ, ಧಾರ್ಮಿಕ ದತ್ತಿ ಸಚಿವರ ಸೂಚನೆಯಂತೆ ವ್ಯವಸ್ಥಾಪನಾ ಸಮಿತಿಯನ್ನು ನೇಮಕಗೊಳಿಸಿ ತಾನು ಈ ಹಿಂದೆ ನೀಡಿದ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದು ಮರು ಆದೇಶ ಮಾಡಿದ್ದರು.
ಇದರ ವಿರುದ್ಧ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕಾನತ್ತೂರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾಳೆಯ ವಿಚಾರಣೆಯ ಬಳಿಕ ಕೋರ್ಟು ಏನು ತೀರ್ಪು ಕೊಡುವುದೋ ಕಾದುನೋಡಬೇಕಾಗಿದೆ.