ಮುರುಳ್ಯ: ಸ.ಹಿ.ಪ್ರಾ. ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

0

ಮುರುಳ್ಯ ಸ.ಹಿ. ಪ್ರಾ. ಶಾಲೆಯಲ್ಲಿ 2023 – 24 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಎ.10 ರಂದು ನಡೆಯಿತು.


ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ಅವಿನಾಶ್ ಡಿ., ಉಪಾಧ್ಯಕ್ಷೆ ಶ್ರೀಮತಿ ಹರ್ಷಿತಾ, ಸದಸ್ಯೆ ಶ್ರೀಮತಿ ವಾರಿಜಾಕ್ಷಿ, ಅಧ್ಯಾಪಕ ವೃಂದ, ಅಡುಗೆ ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು.


7ನೇ ತರಗತಿ ಮಕ್ಕಳು ಶಾಲಾ ನೆನಪಿಗಾಗಿ ಶಾಲಾ ಕಛೇರಿಗೆ ಆಗಮಿಸುವವರಿಗೆ ಕುಳಿತುಕೊಳ್ಳುವ ಆಸನವನ್ನು ಕೊಡುಗೆಯಾಗಿ ನೀಡಿದರು.