ಮೇ.20 ರಿಂದ ಮೇ.24 ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ

0

ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸರಿಂದ ಭಜನಾ ಕಾರ್ಯಕ್ರಮ ಕ್ಕೆ ಚಾಲನೆ

ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಅನುಗ್ರಹ ಸಂದೇಶ, ವಿದ್ವತ್ ಗೋಷ್ಠಿ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ ಮೇ.20 ರಿಂದ‌ ಮೇ.24 ರ ವರೆಗೆ ಮಠದ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಅನುಗ್ರಹ ಸಂದೇಶ, ವಿದ್ವತ್ ಗೋಷ್ಠಿ, ಪ್ರಶಸ್ತಿ ಪ್ರಧಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಳಿವೆ.

ನರಸಿಂಹ ಜಯಂತೀ ಪ್ರಯುಕ್ತ ಮೇ.19 ರಂದು ಬೆಳಗ್ಗೆ 6.30 ಕ್ಕೆ ಭಜನಾ ಕಾರ್ಯಕ್ರಮ ಕ್ಕೆ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕಲಾವಿದ ಯಜ್ಞೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಬೆಳಗ್ಗೆ 6.30. ರಿಂದ ಸಂಜೆ 6.30 ರ ವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಶ್ರೀಮದಾನಂದತೀರ್ಥ ತತ್ತ್ವದರ್ಶಿನೀ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಷಂಪ್ರತಿಯಂತೆ ನಡೆಯಲಿದ್ದು ಮೇ.20 ರ ವಸಂತ ದ್ವಾದಶಿ, ಶ್ರೀ ವೇದವ್ಯಾಸ ಜಯಂತೀ, ವಸಂತ ಪೂಜೆ ನಡೆಯಲಿದೆ. ಮೇ.21 ರಂದು ಪ್ರಾತಕಾಲ ಗಣಹೋಮ ಮತ್ತು ಶ್ರೀ ನರಸಿಂಹ ಹೋಮ ನಡೆಯಲಿದೆ. ಮೇ.22 ರಂದು ”ಶ್ರೀ ನರಸಿಂಹ ಜಯಂತಿಯಂದು ಪ್ರಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ, ರಾತ್ರಿ ಹೊರಾಂಗಣ ಮತ್ತು ರಾಜ ಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ನಡೆಯಲಿದೆ. ಮೇ.23 ರಂದು ವ್ಯಾಸ ಪೂರ್ಣಿಮಾ, ವ್ಯಾಸ ಪೂಜೆ, ಮಹಾರಥೋತ್ಸವ, ವಸಂತ ಪೂಜೆ, ರಾತ್ರಿ ಡೋಲೋತ್ಸವ ನಡೆಯಲಿದೆ.
ಮೇ. 24 ರಂದು ಕುಮಾರಧಾರೆಯಲ್ಲಿ ಅವಭೃತೋತ್ಸವ, ವಸಂತಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ವೇದವ್ಯಾಸ ಸಂಶೋಧನ ಕೇಂದ್ರ ಶ್ರೀ ಸುಬ್ರಹ್ಮಣ್ಯ ಮಠ ಇದರ ಸಹಭಾಗಿತ್ವದೊಂದಿಗೆ ಶ್ರೀ ಅನಿರುದ್ಧತೀರ್ಥ ವೇದಿಕೆಯಲ್ಲಿ ನಡೆಯಲಿದ್ದು
ಮೇ. 19 ಪ್ರಾತಃಕಾಲ ಗಂಟೆ 6.30ರಿಂದ ಭಜನಾ ಕಾರ್ಯಕ್ರಮ ಆರಂಭವಾಗಲಿದ್ದು ಸಂಜೆ ಗಂಟೆ 6.30ರ ವರೆಗೆ ನಡೆಯಲಿದೆ. ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.


ಮೇ.20 ರ ಸಂಜೆ ಗಂಟೆ 5.30ರಿಂದ ರಾತ್ರಿ 7.30ರ ತನಕ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಪ್ರಸ್ತುತಪಡಿಸುವ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದ
ನೃತ್ಯೋಹಂ ನಡೆಯಲಿದೆ.


ಮೇ.21ರ ಬೆಳಗ್ಗೆ 9.30ರಿಂದ ವಿದ್ವತ್‌ಗೋಷ್ಠಿ ವಿದ್ಯಾಪ್ರಸನ್ನ ತೀಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ “ವಿದ್ವತ್ ಗೋಷ್ಠಿ” ನಡೆಯಲಿದೆ.
ಪೂರ್ಣಚಂದ್ರ ವಿದ್ಯಾಪೀಠ, ಬೆಂಗಳೂರು ಇದರ ನಿವೃತ್ತ ಪ್ರಾಂಶುಪಾಲರಾದ ಮಹಾಮಹೋಪಾಧ್ಯಾಯ ಎ. ಹರಿದಾಸ್ ಭಟ್ ಘನ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು
ಸಂಜೆ ಗಂಟೆ 5.00ರಿಂದ 8.00ರ ತನಕ ವಿದ್ವಾನ್ ಡಾ| ಮೈಸೂರು ಮಂಜುನಾಥ್ ಮತ್ತು ವಿದ್ವಾನ್ ಸುಮಂತ್ ಮಂಜುನಾಥ್ ಅವರಿಂದ “ವಿಶೇಷ ವಯಲಿನ್ ವಾದನ” ನಡೆಯಲಿದೆ.


ಮೇ.22 ರ ಬೆಳಗ್ಗೆ 9.30 ರಿಂದ ಶ್ರೀ ಯಜೇಶ್ ಆಚಾರ್ಯ ಮತ್ತು ಬಳಗದಿಂದ ಭಕ್ತಿ ಸಂಗೀತ ನಡೆಯಲಿದೆ. ಅದೇ ದಿನ ಸಂಜೆ ಗಂಟೆ 4.00 ರಿಂದ ಆನಂದತೀರ್ಥ ತತ್ವದರ್ಶಿನೀ ಸಭಾ ಕಾರ್ಯಕ್ರಮದಲ್ಕಿ ಅನುಗ್ರಹ ಸಂದೇಶ ಕಾರ್ಯಕ್ರಮ ಜರುಗಲಿದ್ದು ಉಡುಪಿ ಮಠದ ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಗಳು, ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠ ಉಡುಪಿ ಮಠದ ಪರಮಪೂಜ್ಯ ಈಶಪ್ರಿಯತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ವಿಶ್ವೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಪೂರ್ಣಚಂದ್ರ ವಿದ್ಯಾಪೀಠ, ಬೆಂಗಳೂರು ಇದರ ನಿವೃತ್ತ ಪ್ರಾಂಶುಪಾಲರು ಮಹಾಮಹೋಪಾಧ್ಯಾಯ ಎ. ಹರಿದಾಸ್ ಭಟ್ ಉಪನ್ಯಾಸ ನೀಡಲಿದ್ದಾರೆ.


ಸಂಜೆ ಗಂಟೆ 6 ರಿಂದ 8 ರ ತನಕ ವಿದ್ವಾನ್ ಬಪ್ಪನಾಡು ನಾಗೇಶ ಮತ್ತು ಬಳಗ ದವರಿಂದ “ನಾದಸ್ವರ ಕಛೇರಿ” ನಡೆಯಲಿದೆ.

ತಾ.23-05-2024 ಗುರುವಾರ: ಸಂಜೆ ಗಂಟೆ 5.00ರಿಂದ 7.00ರ
ತನಕ ಕುದ್ರೋಳಿ ಗಣೇಶ್ ಅವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.


ರಾತ್ರಿ ಗಂಟೆ 7.30ರಿಂದ ಸಸಿಹಿತ್ತು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸಸಿಹಿತ್ಸು
ಇವರಿಂದ ಯಕ್ಷಗಾನ ಬಯಲಾಟ – ಅರ್ಧಸತ್ಯ (ತುಳು ಪ್ರಸಂಗ) ನಡೆಯಲಿದೆ.
ಮೇ.24 ರ ಸಂಜೆ ಗಂಟೆ 5.00ರಿಂದ ಯಕ್ಷಗಾನ ಬಯಲಾಟ – ಶ್ರೀಕೃಷ್ಣ ಸಂಧಾನ ನಡೆಯಲಿದೆ.

ನರಸಿಂಹಾನುಗ್ರಹ ಪ್ರಶಸ್ತಿ ಪ್ರಧಾನ
ಈ ಸಲದ ನರಸಿಂಹ ಜಯಂತೀ ಕಾರ್ಯಕ್ರಮದಲ್ಲಿ ಮೇ.22 ರಂದು ನರಸಿಂಹಾನುಗ್ರಹ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಸುಬ್ರಹ್ಮಣ್ಯದ ಆಗೋಳಿಕಜೆ ಚೆನ್ನಪ್ಪ ಗೌಡ, ಸುಬ್ರಹ್ಮಣ್ಯದ ಅಗೋಳಿಕಜೆ ಶ್ರೀಮತಿ ನಾಗಮ್ಮ ಅವರಿಗೆ ಕೊಡ ಮಾಡಲಾಗುವುದು.