ಕನಕಮಜಲು: ಸಂಸ್ಕಾರ ಬೇಸಿಗೆ ಶಿಬಿರ ಉದ್ಘಾಟನೆ

0

ಗ್ರಾಮ ವಿಕಾಸ ಕನಕಮಜಲು, ಯುವಕ ಮಂಡಲ ಕನಕಮಜಲು, ಮಹಿಳಾ ಮಂಡಲ ಕನಕಮಜಲು ಇದರ ವತಿಯಿಂದ ಸಂಸ್ಕಾರ ಬೇಸಿಗೆ ಶಿಬಿರವು ಕನಕಮಜಲಿನ ಶ್ರೀ ಆತ್ಮಾರಾಮ ಸಭಾಭವನದಲ್ಲಿ ಮೇ.19ರಂದು ಉದ್ಘಾಟನೆಗೊಂಡಿತು.

ನಿವೃತ್ತ ಶಿಕ್ಷಕ ಆನಂದ ಮಾಸ್ತರ್ ಅಕ್ಕಿಮಲೆ ಅವರು ಶಿಬಿರವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ವಿನೋಬನಗರ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಅವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ವಿಕಾಸ ಕನಕಮಜಲು ಅಧ್ಯಕ್ಷ ತೇಜ್ ಪ್ರಕಾಶ್ ಬುಡ್ಲೆಗುತ್ತು, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ಅಡ್ಕಾರು, ನಿವೇದಿತಾ ಸಂಚಲನಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಶ್ರೀಹರಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಶ್ರೀಮತಿ ಭವಾನಿ ಮಾಣಿಮಜಲು, ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ ಉಪಸ್ಥಿತರಿದ್ದರು.

ಸಂಸ್ಕಾರ ಬೇಸಿಗೆ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಬಹಿಸಿದ್ದು, ಶಿಬಿರವು ಮೇ.25ರವರೆಗೆ ಜರುಗಲಿದೆ. ಪ್ರತೀ ದಿನ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ, ಆಟ, ಚಿತ್ರಕಲೆ, ಭಜನೆ, ದೇಶಭಕ್ತಿಗೀತೆ, ಜನಪದ ಗೀತೆ, ಕಥೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ.