ಬೇಂಗಮಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಇನ್ನೋವಾ ಕಾರು

0

ಹಿಂಬದಿಯಿದ್ದ ಟಿಪ್ಪರ್ ವಾಹನ ಚಾರಿಕೊಂಡು ಹೋಗಿ ಮತ್ತೊಂದು ಕಾರಿಗೆ ಢಿಕ್ಕಿ!

ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗೆ ಬಿದ್ದ ಘಟನೆ ಸೋಣಂಗೇರಿ-ಬೆಳ್ಳಾರೆ ರಸ್ತೆಯ ಬೇಂಗಮಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ವಾಹನವು ಹೊಸ ರಸ್ತೆಯಾದ ಕಾರಣ ಡಾಮರು ಜಾರಿದ ಪರಿಣಾಮ ,ರಸ್ತೆ ತಿರುವು ಹಾಗೂ ಮುಂಭಾಗ ಜನ ಸೇರಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮುಂಭಾಗ ಬರುತ್ತಿದ್ದ ನೆಕ್ಸಾನ್ ಕಾರಿಗೆ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮೂರು ಗಾಡಿಗಳು ಜಖಂಗೊಂಡಿದ್ದು, ಚಾಲಕ, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು.