ಸುಳ್ಯ : ಮೇಘಾ ಅಮೋಘ ಎಂಟರ್ ಪ್ರೈಸಸ್ ಸೆಕ್ಯೂರಿಟಿ ಸಿಸ್ಟಮ್ಸ್ ಸಿ.ಸಿ ಕ್ಯಾಮೆರಾ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಹತ್ತಿರದ ಕಾಮತ್ ಬಿಲ್ಡಿಂಗ್ ನಲ್ಲಿ ನೂತನ ಮೇಘಾ ಅಮೋಘ ಎಂಟರ್ ಪ್ರೈಸಸ್ ಸೆಕ್ಯೂರಿಟಿ ಸಿಸ್ಟಮ್ಸ್ ಸಿ.ಸಿ ಕ್ಯಾಮೆರಾ ಶಾಪ್ ಮೇ. 29 ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ಗಣಪತಿ ಹವನ ನೆರವೇರಿತು. ನೂತನ ಶಾಪಿನ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿಕ್ ವಿಷನ್ ಕಂಪನಿ ಅಸಿಸ್ಟೆಂಟ್ ಮ್ಯಾನೇಜರ್ ರವಿಚಂದ್ರ ನಿಡ್ಯಮಲೆ ,ಕಾಮತ್ ಬಿಲ್ಡಿಂಗ್ ಮಾಲೀಕ ಕೆ.ಬಿ ಕಾಮತ್, ಸಂಭ್ರಮ ಎಲೆಕ್ರಾನಿಕ್ಸ್ ಮಾಲೀಕ ರೋಹಿತ್ ಅಬೀರ, ಸುಳ್ಯ ಜೂನಿಯರ್ ಕಾಲೇಜು ಉಪನ್ಯಾಸಕರು ದಿವಾಕರ ಮಜಿಕೋಡಿ, ಮೇಘಾ ಅಮೋಘ ಎಂಟರ್ ಪ್ರೈಸಸ್ ಮಾಲೀಕ ತಿಲೇಶ್ ಪುಳ್ಳಾಜೆ, ಮನೆಯವರು- ಕುಟುಂಬಸ್ಥರು, ಗೆಳೆೆಯರು ಉಪಸ್ಥಿತರಿದ್ದರು.

ನಮ್ಮಲ್ಲಿ ಹೆಚ್. ಐ .ಕೆ , ಹಿಕ್ ವಿಷನ್, ಸಿಪಿ ಪ್ಲಸ್, ದಹುಅ, ಸೆಕ್ಯೂರ್ ಬ್ರಾಂಡೆಡ್ ಕಂಪನಿಗಳ ಸಿ.ಸಿ ಕ್ಯಾಮೆರಾ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕ ತಿಳಿಸಿದ್ದಾರೆ .