ಕಲ್ಲಪಳ್ಳಿ: ಶ್ರೀಮತಿ ದೇವಮ್ಮ ಪಿ.ಕೆ ನಿಧನ

0

ಕಲ್ಲಪಳ್ಳಿ ಪೆರುಮುಂಡ ದಿ.ಪಿ.ಎಂ.ಕೃಷ್ಣಪ್ಪ ಗೌಡ ರವರ ಧರ್ಮಪತ್ನಿ ಶ್ರೀಮತಿ ದೇವಮ್ಮ ಪಿ.ಕೆ ರವರು ತಮ್ಮ ಸ್ವಗೃಹ ಪೆರುಮುಂಡದಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪ್ರಗತಿಪರ ಕೃಷಿಕ ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ಜೀ.ಸ.ಅಧ್ಯಕ್ಷ ಬಾಲಚಂದ್ರ ಪಿ.ಕೆ, ಸುಳ್ಯದಲ್ಲಿವೈದ್ಯರಾಗಿರುವ
ರೊ. ಡಾ. ಕೇಶವ ಪಿ.ಕೆ, ಪುತ್ರಿಯರಾದ ಶ್ರೀಮತಿ ಗಿರಿಜಮ್ಮ ಪಿ.ಕೆ, ಶ್ರೀಮತಿ ಕುಸುಮಾವತಿಪಿ.ಕೆ,
ಶ್ರೀಮತಿ ದಯಾಮಣಿ ಪಿ.ಕೆ,ಶ್ರೀಮತಿಉಷಾಕುಮಾರಿ ಪಿ.ಕೆ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು,
ಕುಟುಂಬಸ್ಥರನ್ನು ,ಬಂಧು ವರ್ಗದವರನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ಪೆರುಮುಂಡ ಮನೆಯಲ್ಲಿ ನಡೆಯಲಿರುವುದು.