ಪೆರುವಾಜೆ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.31 ರಂದು ಶಾಲಾ ಪ್ರಾರಂಭೋತ್ಸವ ದಿನದಂದು ವಿದ್ಯಾರ್ಥಿಗಳನ್ನು ಬಹಳ ಅದ್ದೂರಿಯಾಗಿ ವಿದ್ಯಾರ್ಥಿಗಳನ್ನು. ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಗೆ ಆರತಿ ಬೆಳಗಿ , ಹೂ ನೀಡಿ , ಸಿಹಿತಿಂಡಿ ಹಂಚುವುದರ ಮೂಲಕ ಸ್ವಾಗತ ಮಾಡಲಾಯಿತು.

ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ದಾನಿಗಳಾದ ಭೋಜರಾಜ ಶೆಟ್ಟಿ ಯವರು ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು. ರಜಾ ಸಮಯದಲ್ಲಿ ಮಾಡಿದ ಇಂಗ್ಲಿಷ್ ಚಟುವಟಿಕೆಗಳಿಗೆ ಬಹುಮಾನ ಪ್ರಯೋಜಕರಾದ ರಾಮ ಯು. ಇವರು ಬಹುಮಾನ ವಿತರಣೆ ಮಾಡಿದರು. ವಿದ್ಯಾರ್ಥಿಗಳಿಗೆ ಸಿಹಿ ಭೋಜನ ನೀಡಲಾಯಿತು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್., ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಉಮೇಶ್, ಶಿಕ್ಷಕರು, ಎಸ್ .ಡಿ .ಎಂ. ಸಿ ಸದಸ್ಯರು , ಪೋಷಕರು, ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.