ಎಲಿಮಲೆ ಮರ್ಕಂಜ ಮತ್ತು ದೊಡ್ಡತೋಟ ಮರ್ಕಂಜ ರಸ್ತೆಯ ಇಕ್ಕೆಲಗಳನ್ನು ಆವರಿಸುವ ಪೊದೆ-ಗಿಡಗಳು

0

ತೆರವುಗಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರ ಮನವಿ

ಮರ್ಕಂಜದಿಂದ ಎಲಿಮಲೆ ಮತ್ತು ದೊಡ್ಡತೋಟ ಮರ್ಕಂಜ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯನ್ನು ಆವರಿಸಿರುವ ಗಿಡ ಪೊದೆಗಳನ್ನು ತೆರವುಗಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮರ್ಕಂಜ ಎಲಿಮಲೆಯ ರಸ್ತೆಯ ಪನಿವಾರ ಎಂಬಲ್ಲಿ ರಸ್ತೆಯ ಎರಡು ಬದಿಯಲ್ಲಿ ಬಿದಿರಿನ ಗಿಡಗಳು ಬೆಳೆದು ರಸ್ತೆಯ ಅರ್ಧ ಭಾಗವನ್ನು ಆವರಿಸಿರುವ ಕಾರಣ ಪ್ರಯಾಣಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಾಗೂ ಮುಖ್ಯ ರಸ್ತೆಯಿಂದ ಕೆಲವು ಮನೆಯವರು ರಸ್ತೆ ಸಂಪರ್ಕ ಮಾಡಿಕೊಂಡವರು ಚರಂಡಿಗೆ ಮೋರಿ ಪೈಪು ಅಳವಡಿಸದೆ ಚರಂಡಿಗೆ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಚರಂಡಿಯ ನೀರೆಲ್ಲ ರಸ್ತೆಗೆ ಹರಿದು ಪ್ರಮುಖ ರಸ್ತೆ ಕೆಲವು ಕಡೆ ತೀರಾ ಹದಗೆಟ್ಟಿರುತ್ತದೆ. ಅಲ್ಲದೇ ರಸ್ತೆಯ ಬದಿ ಬೆಳೆದ ಪೊದೆಗಳು ಗಿಡಗಳು ರಸ್ತೆಯನ್ನು ಆವರಿಸಿದೆ. ಇದರಿಂದಾಗಿ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ.‌

ಸಂಬಂಪಟ್ಟ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.