ಕನಕಮಜಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮೇ.30ರಂದು ನಡೆಯಿತು.
ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಬುಶ್ರಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು, ಇಲ್ಯಾಸ್ ಪಿ.ಎಚ್. ಸುಣ್ಣಮೂಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಪುಸ್ತಕ ಇರಿಸುವ ಸೆಲ್ಪ್,
ಮೆಡಿಸಿನ್ ಕಿಟ್ ಬಾಕ್ಸ್ ಕೊಡುಗೆಯಾಗಿ ನೀಡಿದರು. ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಮತ್ತು ಮಕ್ಕಳ ಪೋಷಕಿ ಶ್ರೀಮತಿ ಜಯಶ್ರೀ ಬುಡ್ಲೆಗುತ್ತು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಒಂದನೇ ತರಗತಿಗೆ ಆರು ಮಕ್ಕಳು ಹಾಗೂ ಎಲ್ ಕೆಜಿಗೆ ಐದು ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವನಜ ಸ್ವಾಗತಿಸಿ, ವಂದಿಸಿದರು.