ಗಾಂಧಿನಗರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾಗಿ ಹಾಜಿ ಕೆ. ಎಂ. ಮಹಮ್ಮದ್ (ಕೆಎಂಎಸ್ ) ಪ್ರದಾನ ಕಾರ್ಯದರ್ಶಿ ಯಾಗಿ ಹಾಜಿ ಕೆ. ಎಂ. ಮುಹಿಯದ್ದೀನ್ ಫ್ಯಾನ್ಸಿ

0

ಗಾಂಧಿನಗರ :ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ವಾರ್ಷಿಕ ಮಹಾಸಭೆ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಪ್ರಥಮ ಆಡಳಿತ ಸಮಿತಿ ಸಭೆಯಲ್ಲಿ ಈ ಕೆಳ ಗಿನವರನ್ನು 2024- 25 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು, ಜಮಾಅತ್ ಸಮಿತಿ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ (ಕೆಎಂಎಸ್ ) ಇವರನ್ನು ಸರ್ವಾ ನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಬೀಜಕೊಚ್ಚಿ, ಪ್ರಧಾನ ಕಾರ್ಯದರ್ಶಿ ಯಾಗಿ ಹಾಜಿ ಕೆ. ಎಂ. ಮುಹಿಯದ್ದೀನ್ ಫ್ಯಾನ್ಸಿ,ಕಾರ್ಯದರ್ಶಿ ಗಳಾಗಿ ಕೆ. ಎಸ್. ಉಮ್ಮರ್, ಜಿ. ಎಂ. ಇಬ್ರಾಹಿಂ, ಕೋಶಾಧಿಕಾರಿಯಾಗಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್ ಆಯ್ಕೆಯಾದರು, ಕೆ. ಬಿ ಅಬ್ದುಲ್ ಮಜೀದ್, ಹಾಜಿ ಕೆ. ಎಂ. ಮುಸ್ತಫ, ಹಾಜಿ ಐ ಇಸ್ಮಾಯಿಲ್, ಹಾಜಿ ಎಸ್. ಎ. ಹಮೀದ್, ಹಾಜಿ ಅಬ್ದುಲ್ ಖಾದರ್ ಆಜಾದ್ ಆಡಳಿತ ಸಮಿತಿ ನಿರ್ದೇಶಕರಾಗಿ ಮುಂದುವರೆಸಲಾಯಿತು.