ಡಾ.ಪುನೀತ್ ಕುಮಾರ್ ಬೊಳುಗಲ್ಲು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ

0

ಇತ್ತೀಚೆಗೆ ಯುಎಸ್ಎ ಯ ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ರೀಜನಲ್ ಸ್ಟೂಡೆಂಟ್ ಸ್ಕಾಲರ್ಸ್ ಫೋರಮ್ ನಲ್ಲಿ ಡಾ. ಪುನೀತ್ ಕುಮಾರ್ ಬೊಳುಗಲ್ಲುರವರು ಪ್ರಸ್ತುತಪಡಿಸಿದ ” Optimizing Forensic Workflows: Crime Scene Documentation With Image Stiching Software” ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ.

ಯುಎಸ್ಎ ಯ ಅಲ್ಕಾರ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿರುವ ಇವರು, ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದರು.

ಹಲವಾರು ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿ ಎಂಟು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಲ್ಲದೆ ಅನೇಕ ವಿದ್ಯಾರ್ಥಿಗಳಿಗೂ ಇವರು ಮಾರ್ಗದರ್ಶಕರಾಗಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡಿದ ಬಳಿಕ ಇದೀಗ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಇವರ ಪತ್ನಿ ಶ್ರೀಮತಿ ದೀಪಿಕಾ ನ್ಯಾಚುರೋಪಥಿ ವೈದ್ಯರಾಗಿ (ಕನ್ಸಲ್ಟೆಂಟ್) ಯುಎಸ್ಎಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಪುನೀತ್ ರವರು ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೈಲ್ಸ್ ಮಾಲಕ ಬಿ.ಆರ್ ಪದ್ಮಯ್ಯ ಮತ್ತು ಶಾರದ ದಂಪತಿಗಳ ಪುತ್ರ.