ರೋಟರಿ ಶಾಲೆಯ ಪ್ರಣಮ್ಯ ಆಳ್ವಗೆ ಮರು ಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚಳ : ರಾಜ್ಯದಲ್ಲಿ ಐದನೇ ರ್‍ಯಾಂಕ್

0

ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 9ರಂದು ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಣಮ್ಯ ಆಳ್ವ ಮರು ಎಣಿಕೆಯ ನಂತರದ ಫಲಿತಾಂಶದಲ್ಲಿ 620 ಬದಲಾಗಿ 621 ಅಂಕ ಪಡೆದುಕೊಂಡಿದ್ದಾರೆ.

ಇಂಗ್ಲೀಷ್ ನಲ್ಲಿ 124 ಅಂಕಗಳು ಬಂದಿದ್ದು , ಮರು ಮೌಲ್ಯಮಾಪನದಲ್ಲಿ 125 ಅಂಕ ಬಂದಿದೆ.

ಸುಳ್ಯ ತಾಲೂಕಿನಲ್ಲಿ ಪ್ರಥಮ ಸ್ಥಾನಿಯಾಗಿದ್ದ ಪ್ರಣಮ್ಯ ಮರು ಮೌಲ್ಯಮಾಪನದ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಐದನೇ ಮತ್ತು ಜಿಲ್ಲೆಯಲ್ಲಿ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಪ್ರಣಮ್ಯ ಆಳ್ವ ಬಂದಡ್ಕದ ನಿಶಾಂತ್ ಆಳ್ವ ಮತ್ತು ಸುಪರ್ಣ ಆಳ್ವ ದಂಪತಿಯ ಪುತ್ರಿ.