ರಂಗಮಯೂರಿ ಕಲಾ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ-ಪ್ರಸಂಗ ಭಕ್ತ ಸುಧನ್ವ

0

ಸುಳ್ಯರಂಗಮಯೂರಿ ಕಲಾ ಶಾಲೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಜು.6 ರಂದು ರಂಗಮಯೂರಿ ಕಲಾ ವೇದಿಕೆಯಲ್ಲಿ ಭಕ್ತ ಸುಧನ್ವ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.

ಕಲಾವಿದರಾಗಿ ಸುಧನ್ವ ಪಾತ್ರಧಾರಿಯಾಗಿ ರಾಧಾಕೃಷ್ಣ ಕಲ್ಚಾರ್, ಶ್ರೀ ಕೃಷ್ಣನಾಗಿ ವೆಂಕಟ್ರಾಮ್ ಭಟ್ ಸುಳ್ಯ, ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ,ಚೆಂಡೆ ವಾದಕರಾಗಿ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್,ಮದ್ದಲೆಯಲ್ಲಿ ಶ್ರೀಧರ ವಿಟ್ಲ ಸಹಕರಿಸಿದರು.
ಯಕ್ಷಗಾನ ಕಲಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು. ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಪೋಷಕ ಕಮಿಟಿ ಸದಸ್ಯರು ಸಹಕರಿಸಿದರು.