ಸುಳ್ಯ ಲಯನ್ಸ್ ಕ್ಲಬ್‌ಗೆ 3 ನೇ ಅತ್ಯುತ್ತಮ ಕ್ಲಬ್ ಪ್ರಶಸ್ತಿಯೊಂದಿಗೆ 33 ಪ್ರಶಸ್ತಿಗಳು

0

ಸುಳ್ಯ ಲಯನ್ಸ್ ಕ್ಲಬ್‌ಗೆ ೨೦೨೩-೨೪ ನೇ ಸಾಲಿನಲ್ಲಿ ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ ೩೧೭ ಡಿ ಯ ೨೦ ವರ್ಷಗಳ ಮೇಲ್ಪಟ್ಟ ಕ್ಲಬ್‌ಗಳಲ್ಲಿ ೩ನೇ ಅತ್ಯುತ್ತಮ ಸಮಗ್ರ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಬೆಸ್ಟ್ ಪ್ರೆಸಿಂಡೆಂಟ್, ಬೆಸ್ಟ್ ಸೆಕ್ರೆಟರಿ, ಬೆಸ್ಟ್ ಖಜಾಂಜಿ, ಬೆಸ್ಟ್ ಬುಲೆಟಿನ್ ಮತ್ತು ಜಿಲ್ಲಾ ಗವರ್ನರ್ ಪ್ರೊಜೆಕ್ಟ್‌ಗಳಿಗೆ ೧೮ ಪ್ರಶಸ್ತಿಗಳು ಹಾಗೂ ೧೪ ವೈಯಕ್ತಿಕ ಪ್ರಶಸ್ತಿಗಳು ಸೇರಿ ಒಟ್ಟು ೩೩ ಪ್ರಶಸ್ತಿಗಳು ಲಭಿಸಿದೆ.
ಜು.೬ರಂದು ಮುಲ್ಕಿಯ ಸುಂದರರಾಮ್ ಶೆಟ್ಟಿ ಸಭಾಭವನದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್ ರವರ ತಂಡ, ಜಿಲ್ಲಾ ಗವರ್ನರ್ ಡಾ| ಮೆಲ್ವಿನ್ ಡಿಸೋಜಾರವರಿಂದ ಪ್ರಶಸ್ತಿ ಪಡೆದುಕೊಂಡರು. ಸುಳ್ಯ ಲಯನ್ಸ್‌ನ ೨೦ ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.


ಸುಳ್ಯ ಲಯನ್ಸ್ ಕ್ಲಬ್ ಕೊಡಿಯಾಲಬೈಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಅಡಿಕೆ ತೋಟ ಮಾಡಿ ಪೋಷಿಸುತ್ತಿರುವುದು, ಜಟ್ಟಿಪಳ್ಳದಲ್ಲಿ ಮಾರ್ಗ ಸೂಚಿ ಫಲಕ, ಇಡ್ಯಡ್ಕ ಶಾಲೆಗೆ ಸ್ವಾಗತ ದ್ವಾರ ಹೀಗೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ.