ಗೂನಡ್ಕ: ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

0

ದ.ಕ.ಸಂಪಾಜೆ ಗ್ರಾಮದ ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಅಬ್ದುಲ್ ರೆಹಮಾನ್ ದೊಡ್ಡಡ್ಕ ಅವರನ್ನು ಬೀಳ್ಕೊಡಲಾಯಿತು.

ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಜಾಫರ್ ಸಾದಿಕ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಎ.ಟಿ.ಹಸನ್, ಕೋಶಾಧಿಕಾರಿ ಡಿ.ಎಂ.ಅಬ್ದುಲ್ಲ, ಪದಾಧಿಕಾರಿಗಳಾದ ಟಿ.ಬಿ.ಅಬ್ದುಲ್ ಅಝೀಝ್, ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ, ಮಹಮ್ಮದ್ ಕುಂಞ ಗೂನಡ್ಕ, ಎ.ಟಿ.ಅಶ್ರಫ್ ದೊಡ್ಡಡ್ಕ ಸೇರಿದಂತೆ ಜಮಾಅತ್ ಅಧೀನದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.