ನಾಳೆ (ಜು.11) ಸುಬ್ರಹ್ಮಣ್ಯದ ಈ ಭಾಗದಲ್ಲಿ ಕರೆಂಟಿಲ್ಲ

0

ಜು.11ರ ಗುರುವಾರದಂದು ಸುಬ್ರಹ್ಮಣ್ಯ 33/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ ಸುಬ್ರಹ್ಮಣ್ಯ ಉಪಕೇಂದ್ರದಿಂದ ಹೊರಡುವ ಹರಿಹರ, ನಡುಗಲ್ಲು, ಕುಮಾರಧಾರ, ಆದಿಶೇಷ, ಕೈಕಂಬ ಮತ್ತು ಯೇನೆಕಲ್ಲು 11ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ