ಸಂಪೂರ್ಣ ಶಿಥಿಲ ಗೊಂಡ ಮೊಡಪ್ಪಾಡಿ ಸೇತುವೆ‌

0

ಪಂಬೆತ್ತಾಡಿ ಗ್ರಾಮದ ಮೊಡಪ್ಪಾಡಿ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ. ಕಿರಿದಾದ ಸೇತುವೆ ಇದಾಗಿದ್ದು, ಒಂದು ಬದಿ ಗಾರ್ಡ್ ಮುರಿದು ಹೋಗಿದ್ದು ವಾಹನ ಸವಾರರಿಗೆ ಅಪಾಯ ಕಾದಿದೆ.

ಈ ಕುರಿತು ಕಲ್ಮಡ್ಕ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅನೇಕ ಬಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಗ್ರಾಮ ಸಭೆ ನಿರ್ಣಯ ಕೂಡ ಕಳುಹಿಸಲಾಗಿದೆ. ಆದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ,ಹೊರತು ಸೇತುವೆ ನಿರ್ಮಾಣ ಕುರಿತು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪಂಬೆತ್ತಾಡಿಯಲ್ಲಿ ನೂರಾರು ಮನೆಗಳು ಸೇರಿದಂತೆ,ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ,ಅಂಚೆ ಕಚೇರಿ, ಆರೋಗ್ಯ ಇಲಾಖೆ ಉಪ ಕೇಂದ್ರ, ಇರುತ್ತದೆ. ಈ ಸೇತುವೆ ಮೂಲಕವೇ ಕರಿಕ್ಕಳದಿಂದ ಪಂಬೆತ್ತಾಡಿ ಸಂಪರ್ಕಿಸಲು ಏಕೈಕ ರಸ್ತೆ ಇರುವುದರಿಂದ ಮುಂದೆ ಸಂಪರ್ಕ ಕಡಿತ ಗೊಂಡರೆ ಗ್ರಾಮಸ್ಥರು ಬಹಳಷ್ಟು ತೊಂದರೆ ಪಡ ಬೇಕಾಗ ಬಹುದು. ಇದು ಕಿರಿದಾದ ಸೇತುವೆಯಾಗಿರುವುದರಿಂದ ಇಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ.ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಯವರು ಗಮನ ಸೇತುವೆ ಪರಿಶೀಲನೆ ನಡೆಸಿ ಸರಿ ಪಡಿಸ ಬೇಕಾಗಿದೆ.-ಮಧು ಪಂಜ