ಮಂಜು ಬ್ರದರ್ಸ್ ತಂಡದಿಂದ ಡ್ಯಾನ್ಸ್ ತರಗತಿಗಳು ಆರಂಭ

0

ಸುಳ್ಯದಲ್ಲಿ ಸತತ 37 ನೇ ವರ್ಷದಲ್ಲಿ ಡ್ಯಾನ್ಸ್ ನಡೆಸುತ್ತಿರುವ ಟೀಮ್ ಎಂ.ಬಿ.ಡಿ.ಟಿ ತಂಡದ ಮಂಜು ಬ್ರದರ್ಸ್ ಡ್ಯಾನ್ಸ್ ಟ್ರೂಫ್ ವತಿಯಿಂದ ಡ್ಯಾನ್ಸ್ ತರಗತಿಗಳು ಆರಂಭಗೊಂಡಿದೆ. ಪ್ರತೀ ಆದಿತ್ಯವಾರ ಬೆಳಿಗೆ 8.15 ರಿಂದ 10 ರವರೆಗೆ ಯುವಕ ಮಂಡಲ ಸಭಾಭವನ ಮಡಪ್ಪಾಡಿ, 11.00 ರಿಂದ ಮಧ್ಯಾಹ್ನ 1.00 ರವರೆಗೆ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರದ ಅಮೃತಭವನ, ಮಧ್ಯಾಹ್ನ 2.30 ರಿಂದ 4.30 ರವರೆಗೆ ಕುಂಬ್ರದ ಅಕ್ಷಯ ಆರ್ಕೇಡ್ ನಲ್ಲಿ ನಡೆಯಲಿದೆ. ಡ್ಯಾನ್ಸ್ ಆಸಕ್ತರು ನೃತ್ಯ ನಿರ್ದೇಶಕ ಮಂಜು ಸುಳ್ಯ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.