ಬದುಕು ಪ್ರಪುಲ್ಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ. ರೋ. ಪಿ.ಡಿ.ಜಿ. ರಂಗನಾಥ್ ಭಟ್

0

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

       ಈ ಪರಿಸರದ ಒಂದಿಷ್ಟು ಜನರಿಗೆ ತನ್ನಿಂದ ಆದಷ್ಟು ಸೇವೆಯನ್ನು ಕಾಯ ವಾಚ ಮನಸ ನೀಡಲು ಒಪ್ಪಿ ಶ್ರೇಷ್ಠ ಜನರ ಆಚಾರ ವಿಚಾರ ಹಾಗೂ ನಡೆ-ನುಡಿಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾರ್ಗದರ್ಶನ ದರ್ಶಕವಾಗುವ ಧ್ಯೇಯವನ್ನು ಸಾಕಾರಗೊಳಿಸಲು ರೋಟರಿ ಸಂಸ್ಥೆ ಸದಾ ಪಣತೊಟ್ಟಿದೆ. ಈ ಬದುಕು ಪ್ರಪುಲ್ಲತೆಯಿಂದ ಸಾಗಬೇಕಾದರೆ ಸೇವಾ ಮನೋಭಾವನೆ ಅತ್ಯಗತ್ಯ ಎಂದು ರೋಟರಿ ಜಿಲ್ಲೆ 3150ಹಾಗು 3191 ಇದರ ಅಸಿಸ್ಟೆಂಟ್ ರಿಜಿನಲ್ ಕೋ ಆರ್ಡಿನೇಟರ್ ರೋ. ರಂಗನಾಥ ಭಟ್ ನುಡಿದರು. 






       ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದ ಪ್ರಧಾನ ಅಧಿಕಾರಿಯಾಗಿ ಮಾತನಾ ಡಿದರು. 

ಆರಂಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ.ಪ್ರಶಾಂತ ಕೋಡಿಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸವಣೂರು ವಿದ್ಯಾ ರಶ್ಮಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸೀತಾರಾಮ ರೈ ಮಾತನಾಡಿದರು.

ಕ್ಲಬ್ಬಿನ ಪ್ರಸಕ್ತ ಕಾರ್ಯದರ್ಶಿ ಮೋಹನ್ದಾಸ್ ಎಣ್ಣೆ ಮಜಲ್ ವರದಿ ವಾಚಿಸಿದರು ಪದಗ್ರಹಣ ಅಧಿಕಾರಿ ರಂಗನಾಥ್ ಭಟ್ ಅವರು ನೂತನ ಅಧ್ಯಕ್ಷ ಚಂದ್ರಶೇಖರ ನಾಯರ್, ಕಾರ್ಯದರ್ಶಿ ಚಿದಾನಂದ ಕುಳ, ಖಜಾಂಜಿ ಜಯಪ್ರಕಾಶ್ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ತದನಂತರದ ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿ ಮುಂದಿನ ಸಾಲಿನಲ್ಲಿ ತಾನು ಕೈಗೊಳ್ಳುವಂತ ಎಲ್ಲ ಸಮಾಜಮುಖಿ ಸೇವೆಗಳಿಗೆ ಎಲ್ಲರ ಸಹಕಾರವನ್ನು ಕೋರಿದರು. ವಲಯ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಮಾತನಾಡಿ ಜಿಲ್ಲಾ ಗವರ್ನರ್ ಅವರ ಮುಂದಿನ ಯೋಜನೆಗಳು ಹಾಗೂ ರೋಟೆರಿಯ ಉದ್ದೇಶಗಳನ್ನು ವಿವರಿಸಿದರು, ಹಾಗೆ ರೋಟರಿ ಬುಲೆಟಿನನ್ನು ಬಿಡುಗಡೆಗೊಳಿಸಿದರು. ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ ಶುಭ ಹಾರೈಸಿದರು . ಸುಳ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಯೋಗಿತ ಗೋಪಿನಾಥ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ಲಬ್ಬಿನ ಜಿಎಸ್ಆರ್ ಸವಣೂರು ಸೀತಾರಾಮ ರೈ ಹಾಗು ಪಿ. ಡಿ .ಜಿ. ರಂಗನಾಥ್ ಭಟ್ ಅವರುಗಳನ್ನ ಸನ್ಮಾನಿಸಲಾಯಿತು ಪ್ರಸಕ್ತ ಸಾಲಿನ ಎಸ್ .ಎಸ್. ಎಲ್. ಸಿ .ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಎಸ್. ಎಸ್ .ಪಿ. ಯು. ಸಿ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳನ್ನು ಕ್ಲಬ್ಬಿನ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಏನೇ ಕಲ್ಲು ಅಂಗನವಾಡಿ ಮೂಲಸೌಕರ್ಯಕ್ಕೆ ದೇಣಿಗೆ, ಬ್ಯಾಡ್ಮಿಂಟನ್ ಆಟಗಾರನಿಗೆ ಕೊಡುಗೆ ,ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ಕೊಡುಗೆಗಳನ್ನು ದಾನಿಗಳಾದ ಚಂದ್ರಶೇಖರ ನಾಯರ್, ಬಾಲಕೃಷ್ಣ ಪೈ, ಹಾಗೂ ಅಮೆರಿಕನ್ ಯೂನಿವರ್ಸಿಟಿಯ ಬ್ಯಾಡ್ಮಿಂಟನ್ ಕೋಚ್ ರಾಜ ಸುಬ್ರಹ್ಮಣ್ಯ ಅವರುಗಳು ವಿತರಿಸಿದರು.

ರೊಟೇರಿಯನ್ ಗಳಾದ ಶಿವರಾಮ ಏನೇಕಲ್ , ಬಾಲಕೃಷ್ಣ ಪೈ, ಭವಾನಿ ಶಂಕರ ಪೈಲಾಜೆ, ಕಿಶೋರ್ ಕುಮಾರ್ ಕೂಜುಗೋಡು ಜಯಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಪೂರ್ವ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು ಪೂರ್ವ ಅಧ್ಯಕ್ಷ ಭರತ್ ನೆಕ್ರಾಜೆ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ಚಿದಾನಂದ ಕುಳ ಧನ್ಯವಾದ ಸಮರ್ಪಿಸಿದರು. ವಲಯ ಐದು ಹಾಗೂ ನಾಲ್ಕರ ವಿವಿಧ ಕ್ಲಬ್ಬುಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು. ರೋಟರಿ ಪದಗ್ರಹ ಗ್ರಹಣ ಸಮಾರಂಭಕ್ಕೆ ಬಂದ ಎಲ್ಲರಿಗೂ ನೂತನ ಅಧ್ಯಕ್ಷರ ವತಿಯಿಂದ ರಂಬುಟ ಗಿಡವನ್ನು ಉಚಿತವಾಗಿ ನೀಡಲಾಯಿತು.