ಜು. 21: ಬೆಳ್ಳಾರೆಯಲ್ಲಿ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ

0


ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ ಮತ್ತು ಸ್ನೇಹಿತರ ಕಲಾ ಸಂಘದ ಜಂಟಿ ಆಶ್ರಯದಲ್ಲಿ ಜು.21ರಂದು ಆದಿತ್ಯವಾರ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ ಬೆಳ್ಳಾರೆ ಸಮೀಪದ ಪಡ್ಪು ಕೃಷಿಕ ಶೇಷಪ್ಪ ಗೌಡರ ಮನೆಯಲ್ಲಿ ನಡೆಯಲಿದೆ. ಆ ದಿನ ಬೆಳಿಗ್ಗೆ ಆಟಿಯ ಮಹತ್ವದ ಬಗ್ಗೆ ಉಪನ್ಯಾಸ, ಆಟಿಯ ತಿಂಡಿ ತಿನಿಸುಗಳ ಪ್ರದರ್ಶನ ಬಳಿಕ ಸ್ಥಳೀಯ ಶಾಲಾ,ಕಾಲೇಜು ಮಕ್ಕಳಿಗೆ ಮತ್ತು ಜ್ಞಾನದೀಪದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.