ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ

0

ಕುಮಾರಧಾರಾ ನದಿ 5 ನೇ ದಿನವೂ ಮುಳುಗಡೆ

ಹೆದ್ದಾರಿಗೆ ನುಗ್ಗಿದ ನೀರು

ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಕುಮಾರಧಾರಾ ನದಿ ಸ್ನಾನ ಘಟ್ಟ 5 ನೇ ದಿನವೂ ಮುಳುಗಡೆಯಾಗಿಯೇ ಇಂದು ಸುಬ್ರಹ್ಮಣ್ಯ – ಪಂಜ ರಾಜ್ಯ
ಹೆದ್ದಾರಿಗೂ ನೀರು ನುಗ್ಗಿದೆ.

ಸ್ನಾನಘಟ್ಟದ ದೇವರಕಟ್ಟೆ ಶೌಚಾಲಯ, ಡ್ರೆಸ್ಸಿಂಗ್ ರೂಮ್ ಸಂಪೂರ್ಣ ಜಲಾವೃತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟದ ಬಳಿಯ ಸುಬ್ರಹ್ಮಣ್ಯ – ಪಂಜ ರಾಜ್ಯ ಹೆದ್ದಾರಿ ರಸ್ತೆಗೆ ನೀರು ನುಗ್ಗಿ ಸದ್ಯ ಸಂಚಾರ ಸ್ಥಗಿತಗೊಳಿಸಲಾಗಿದೆ.
ರಸ್ತೆಯಲ್ಲೇ ನೀರು ಹರಿಯುತ್ತಿದ್ದು ನದಿ ನೀರು ನದಿ ಪಾತ್ರದ ಕೃಷಿತೋಟಗಳಿಗೂ ನುಗ್ಗಿದೆ.